ಚುನಾವಣೆ ನೀತಿ ಸಂಹಿತೆ; ಜಿಲ್ಲೆಯಲ್ಲಿ ರಕ್ತದ ಕೊರತೆ

blood
Published on
  • ಗೋಪಾಲಕೃಷ್ಣ ಪಾದೂರು, ಉಡುಪಿ
    ಬೇಸಿಗೆಯಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಬವಣೆಯ ಜೊತೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ರಕ್ತದಾನ ಶಿಬಿರಗಳು ನಡೆಯದೆ ವಿವಿಧ ಆಸ್ಪತ್ರೆಗಳು ಹಾಗೂ ಬ್ಲಡ್​ ಬ್ಯಾಂಕ್​ ಗಳಲ್ಲಿ ರಕ್ತದ ಕೊರತೆ ವ್ಯಾಪಕವಾಗಿದೆ.

ಜಿಲ್ಲಾ ರಕ್ತನಿಧಿ ಕೇಂದ್ರ, ರೆಡ್​ ಕ್ರಾಸ್​ ಬ್ಲಡ್​ ಬ್ಯಾಂಕ್​, ಕೆಎಂಸಿ ರಕ್ತನಿಧಿ ಕೇಂದ್ರಗಳಲ್ಲಿ ಶೇ. 30 ರಿಂದ 40ರಷ್ಟು ರಕ್ತದ ಅಭಾವ ಉಂಟಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹಾಗೂ ಕೆಲವರಿಗೆ ರಜೆ ಇರುವುದರಿಂದ ಬೇಕಾದಷ್ಟು ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುತ್ತಿಲ್ಲ. ಇನ್ನೊಂದೆಡೆ ಕಳೆದ ಒಂದೂವರೆ ತಿಂಗಳಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಂಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಇದೇ ರಕ್ತದ ಕೊರತೆ ಉಂಟಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರಗಳು ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ ಕಳೆದ ತಿಂಗಳಿನಿಂದ ಸಂಸಂಸ್ಥೆಗಳ ಕಾರ್ಯಕರ್ತರು ಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಶಿಬಿರ ಆಯೋಜಿಸುವವರ ಸಂಖ್ಯೆ ಕಡಿಮೆಯಾಗಿದೆ. ಚುನಾವಣೆಯಿಂದ ರಕ್ತದಾನ ಶಿಬಿರಗಳಿಗೆ ಯಾವುದೇ ತೊಂದರೆಯಿಲ್ಲ. ಆದರೆ ರಾಜಕೀಯ ಬೆಳವಣಿಗೆಯಿಂದಾಗಿ ಶಿಬಿರಗಳು ಕಡಿಮೆಯಾಗಿವೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಮೇ 7ಕ್ಕೆ 2ನೇ ಹಂತದ ಚುನಾವಣೆಯೂ ಮುಗಿಯುತ್ತಿದ್ದು, ಆ ಬಳಿಕ ರಕ್ತದಾನ ಶಿಬಿರಗಳು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಹಾಗೂ ಬ್ಲಡ್​ ಬ್ಯಾಂಕ್ಗಳಲ್ಲಿ ರಕ್ತದ ಬೇಡಿಕೆ ಸರಿದೂಗಿಸಲು ದಾನಿಗಳನ್ನು ಕಚೇರಿಗೆ ಕರೆಸಿಕೊಂಡು ರಕ್ತ ಪಡೆಯಲಾಗುತ್ತಿದ್ದರೂ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ.

ಬೇಡಿಕೆ ಜಾಸ್ತಿ; ಸಂಗ್ರಹ ಕಡಿಮೆ
ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಜನವರಿಯಲ್ಲಿ 564 ಯುನಿಟ್​ ಸಂಗ್ರಹಿಸಲಾಗಿತ್ತು. ಆದರೆ 716 ಯುನಿಟ್​ ರಕ್ತಕ್ಕೆ ಬೇಡಿಕೆ ಬಂದಿತ್ತು. ಅದೇ ರೀತಿ ೆಬ್ರವರಿಯಲ್ಲಿ 782 ಯುನಿಟ್​, ಮಾರ್ಚ್​ನಲ್ಲಿ 676 ಯುನಿಟ್​, ಎಪ್ರಿಲ್​ ನಲ್ಲಿ 479 ಯುನಿಟ್​ ಸಂಗ್ರಹವಾಗಿದ್ದರೆ, ಕ್ರಮವಾಗಿ 964 ಯುನಿಟ್​, 856 ಯುನಿಟ್​, 894 ರಕ್ತ ಬೇಕಾಗಿತ್ತು.
ಕೆಎಂಸಿ ಬ್ಲಡ್​ಬ್ಯಾಂಕ್​ ನಲ್ಲಿ ಜನವರಿಯಲ್ಲಿ 1097 ಯುನಿಟ್​, ೆ. 944, ಮಾ.1060, ಏ. 1070 ಯುನಿಟ್​ ಸಂಗ್ರಹಿಸಲಾಗಿದ್ದು, ರೋಗಿಗಳಿಗೆ ಜ.1992, ೆ.- 1947, ಮಾ. -2228, ಏ. -2131 ಯುನಿಟ್​ ರಕ್ತ ನೀಡಲಾಗಿದೆ. ಪ್ರತಿ ದಿನ 100 ರಿಂದ 150 ಯುನಿಟ್​ ರಕ್ತಕ್ಕೆ ಬೇಡಿಕೆ ಇದೆ.
ಕುಂದಾಪುರ ರೆಡ್​ಕ್ರಾಸ್​ ಬ್ಲಡ್​ ಬ್ಯಾಂಕ್​ ನಲ್ಲಿ ೆ. 325 ಯುನಿಟ್​, ಮಾ. 573, ಏ.485 ಯುನಿಟ್​ ರಕ್ತ ಸಂಗ್ರಹಿಸಲಾಗಿದ್ದು, ಆಸ್ಪತ್ರೆಗಳಿಂದ ೆಬ್ರವರಿಯಲ್ಲಿ 500, ಮಾರ್ಚ್​ನಲ್ಲಿ 700, ಏಪ್ರಿಲ್​ ನಲ್ಲಿ 550 ಯುನಿಟ್​ ರಕ್ತಕ್ಕೆ ಬೇಡಿಕೆ ಬಂದಿದೆ.

ಮಳೆಗಾಲಕ್ಕೆ ಮುನ್ನ ರಕ್ತಸಂಗ್ರಹ ಅಗತ್ಯ
ಕಳೆದ 2 ತಿಂಗಳಿನಿಂದ ವಿವಿಧ ಸರ್ಜರಿಗಳು, ಅಪಘಾತದಿಂದ ಗಾಯಗೊಂಡವರಿಗೆ ಚಿಕಿತ್ಸೆ, ಹೆರಿಗೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಕ್ತಕ್ಕೆ ಬೇಡಿಕೆ ಹೆಚ್ಚಾಗಿದೆ. ಇನ್ನು ಮಳೆಗಾಲದಲ್ಲಿ ಡೆಂ, ಮಲೇರಿಯಾ ಮುಂತಾದ ಸೋಂಕಿನ ಪ್ರಮಾಣ ಜಾಸ್ತಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಬ್ಲಡ್​ ಬ್ಯಾಂಕ್​ಗಳು ಸಾಕಷ್ಟು ಪ್ರಮಾಣದಲ್ಲಿ ರಕ್ತ ಶೇಖರಿಸಿಕೊಂಡು ಇಟ್ಟುಕೊಳ್ಳಬೇಕಿದೆ. ಈಗ ಶಿಬಿರಗಳು ನಡೆಸಲು ಕಷ್ಟವಾದರೆ ರಕ್ತದ ಸಂಗ್ರಹವೂ ಇಳಿಮುಖವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net