ರೈತರ ಸಮಸ್ಯೆಯನ್ನ ಹತ್ತಿರದಿಂದ ಬಲ್ಲೆ: ಸರ್ವೋದಯ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಹೇಳಿಕೆ

Madhuchandan)
Published on

ಮಂಡ್ಯ: ಇಂದಿನ ದಿನದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವುಗಳನ್ನು ಬಗೆಹರಿಸಲು ನಿರಂತರ ಹೋರಾಟ ಮಾಡುತ್ತಿರುವ ನನಗೆ ಈ ಚುನಾವಣೆಯಲ್ಲಿ ಬಲ ತುಂಬಿ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಮನವಿ ಮಾಡಿದರು.

ತಾಲೂಕಿನ ಚಿಕ್ಕಬಳ್ಳಿ, ಹಲ್ಲೇಗೆರೆ, ಚಂದಗಾಲು, ರಾಯಶೆಟ್ಟಿಪುರ, ಜಿ.ಹೊಸಳ್ಳಿ, ಜಿ.ಹೊಸಳ್ಳಿ ಕೊಪ್ಪಲು, ಕಾಲನಿ, ಚಿಕ್ಕಕೊತ್ತಗೆರೆ, ದೊಡ್ಡಕೊತ್ತಗೆರೆ, ತಂಗಳಗೆರೆ, ಮಾಯಪ್ಪನಹಳ್ಳಿ, ಗುಡಿಗೇನಹಳ್ಳಿ, ದ್ಯಾಪಸಂದ್ರ ಗ್ರಾಮಗಳಲ್ಲಿ ಮತಯಾಚನೆ ವೇಳೆ ಮಾತನಾಡಿದರು. ಚುನಾವಣೆ ಸಮಯದಲ್ಲಿ ಜನರ ಬಳಿ ಬಂದು ಮುಖ ತೋರಿಸಿ ಮತದಾನದ ಬಳಿಕ ಕ್ಷೇತ್ರವನ್ನು ಮರೆಯುವ ವ್ಯಕ್ತಿಯಲ್ಲ. ಯಾವುದೇ ಅಧಿಕಾರ ಇಲ್ಲದಿದ್ದರೂ ಜನಸಾಮಾನ್ಯರು, ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಸಮಸ್ಯೆ ಬಗೆಹರಿಸುವುದರ ಜತೆಗೆ ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ಅಂತೆಯೇ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆಹರಿಸುವ ಯಾವುದೇ ಅಭ್ಯರ್ಥಿಗಳಿಗೆ ತಮ್ಮ ಅತ್ಯಮೂಲ್ಯವಾದ ಮತ ಕೊಡಬೇಡಿ. ಇದರಿಂದ ನಮ್ಮ ಭವಿಷ್ಯದ ಪೀಳಿಗೆ ನಷ್ಟ ಅನುಭವಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net