ಅವಕಾಶ ಕೊಡಿ ಋಣ ತೀರಿಸುತ್ತೇನೆ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ

K.S.Vijayananda)
Published on

ಮಂಡ್ಯ: ನಮ್ಮ ಕುಟುಂಬ ಕಷ್ಟಕಾಲದಲ್ಲಿದ್ದು, ನಿಮ್ಮ ಮುಂದೆ ಬಂದು ಮತ ಭಿಕ್ಷೆ ಬೇಡುತ್ತಿದೆ. ದಯವಿಟ್ಟು ನನಗೆ ಒಂದು ಮತ ಹಾಕಿ. ನಿಮ್ಮ ಋಣವನ್ನು ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ ನನ್ನನ್ನು ಗೆಲ್ಲಿಸಿಕೊಡಿ ಎಂದು ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ ಮಾಡಿದರು.

ನಗರದ 35ನೇ ವಾರ್ಡ್ ಷುಗರ್‌ಟೌನ್ ಹಾಗೂ ದೇವೇಗೌಡನದೊಡ್ಡಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ನಮ್ಮ ತಾತ ಕೆ.ವಿ.ಶಂಕರಗೌಡ ಹಾಗೂ ನಮ್ಮ ತಂದೆ ಕೆ.ಎಸ್.ಸಚ್ಚಿದಾನಂದ ಅವರು ಕುಟುಂಬಕ್ಕಾಗಿ ಯಾವುದೇ ಆಸ್ತಿ ಮಾಡಿಕೊಂಡಿಲ್ಲ. ಬದಲಿಗೆ ಸಾರ್ವಜನಿಕ ಬದುಕಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.

ಮತಯಾಚನೆ ವೇಳೆ ಯುವಕರು ಹಾಗೂ ಮಹಿಳೆಯರು ತೋರಿಸುತ್ತಿರುವ ಪ್ರೀತಿ ನಮ್ಮ ಗೆಲುವಿಗೆ ಸ್ಪಷ್ಟ ನಂಬಿಕೆ ಬರುತ್ತಿದೆ. ನನ್ನ ಚಿಹ್ನೆ ವಜ್ರದ ಗುರುತಿಗೆ ತಮ್ಮ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಕೋರಿದರು.

ಶಾಸಕ ಎಂ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಬೋರೇಗೌಡ, ಬಿ.ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net