ಹಿಂದೆ ಭಾರತಕ್ಕೆ ಯಾರೂ ಗೌರವ ಕೊಡುತ್ತಿರಲಿಲ್ಲ. ಭಾರತೀಯರ ಮಾತನ್ನ ಯಾರು ಕೇಳುತ್ತಿರಲಿಲ್ಲ. ಆದರಿಂದು ನಮ್ಮ ದೇಶದ ಗೌರವ, ಘನತೆ ವಿಶ್ವ ಮಟ್ಟದಲ್ಲಿ ಹೆಚ್ಚಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿಗಾಗಿ ಕಾಯುತ್ತಿದ್ದಾರೆ. ಅವರ ವ್ಯಕ್ತಿತ್ವಕ್ಕೆ ವಿಶ್ವದಲ್ಲಿ ವಿಶೇಷ ಗೌರವ ಇದೆ. ರಷ್ಯಾ, ಯೂಕ್ರೇನ್ ಕದನದಲ್ಲಿ ಸಿಲುಕಿದವರು ಹಾಗೂ ಸುಡಾನ್ ಕದನದಲ್ಲಿ ಸಿಲುಕಿದ್ದವರನ್ನ ಆಪರೇಷನ್ ಕಾವೇರಿ ಹೆಸರಲ್ಲಿ ರಕ್ಷಣೆ ಮಾಡಲಾಗಿದೆ. ರಾಜ್ಯದಲ್ಲಿ ಮತ್ತೆ ಅತಂತ್ರ ಸರ್ಕಾರ ಬರುವುದು ಬೇಡ. ಬಿಜೆಪಿಗೆ ಪ್ರಚಂಡ ಬಹುಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು.