ಚುನಾವಣೆ ಜಾಗೃತಿ ಕಾರ್ಯ ಶ್ಲಾಘನೀಯ

22Mamadapur1
Published on

ಮಮದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್​ ರಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಚುನಾವಣೆ ಮಹತ್ವ ಹಾಗೂ ಮತದಾನ ಹಕ್ಕು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಬೆಟಗೇರಿಯ ಬೋಧಿವನ ಬುದ್ಧ ವಿವಾಹಾರದ ಬೋದಿಪಿಯ ಬಂತೇಜಿ ಹೇಳಿದರು.

ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶಾಲಾ ಸಂಸತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ ಸಂಸತ್ತಿನ ಒಟ್ಟು 8 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ವಿದ್ಯಾರ್ಥಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬಳಿಕ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು ಹಾಗೂ ಪ್ರಚಾರ ನಡೆಯಿತು. ಮತದಾನದ ಅಂಗವಾಗಿ ಎನ್​ಸಿಸಿ ವಿದ್ಯಾರ್ಥಿನಿಯರು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು. ಇವಿಎಂ ಮೊಬೈಲ್​ ಆ್ಯಪ್​ ಮೂಲಕ ವಿದ್ಯಾರ್ಥಿನಿಯರು ಮತದಾನ ಮಾಡಿದರು. ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್​ ಸದಸ್ಯರಿಗೆ ಶಿಕಿ ಎಂ.ಎಸ್​.ಪಾಟೀಲ ಪ್ರಮಾಣ ಪತ್ರ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕರಾದ ಸುನೀಲ ಸಿಂಗಾರಿಗೊಪ್ಪ, ಕೆ.ಜಿ.ಪಟ್ಟಣಶೆಟ್ಟಿ, ಕೆ.ಎಂ.ಭೋಸಲೆ, ಎ.ಎಲ್​.ಬಾರಿಗಿಡದ, ಡಿ.ಬಿ.ಕೊಳ್ಳಿ, ಸುರೇಶ ನವಲಗುಂದ, ಶ್ರೀದೇವಿ ಪತಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net