

ವೆಂಕಟರಾಜು ಎಸ್ ದೊಡ್ಡಬಳ್ಳಾಪುರ.
ರಾಜಕೀಯ ಹೊರತಾಗಿ ರೈತಾಪಿ ವರ್ಗದ ಪರ ಕೆಲಸ ವಾಡುವ ರೈತ ಸಂಸ್ಥೆಯಾದ ತಾಲೂಕು ವ್ಯವಸಾಯೋತ್ಪನ್ನ ವಾರಾಟ ಸಹಕಾರ ಸಂದ(ಟಿಎಪಿಎಂಸಿಎಸ್) ಚುನಾವಣೆ ರಾಜಕೀಯ ನಾಯಕರ ರಣಕಣಕ್ಕೆ ವೇದಿಕೆಯಾಗಿ ವಾರ್ಪಾಡಾಗಿದೆ. ಮೂರು ಪಕ್ಷಗಳಿಗೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ದಿಕ್ಸೂಚಿಯಂತೆ ಬಿಸಿ ಏರಿದೆ. ಇದೀಗ ಸಂಪೂರ್ಣ ಬಹುಮತ ಪಡೆಯಲು ಮೂರು ಪಕ್ಷಗಳ ನಾಯಕರು ಕಸರತ್ತು ಆರಂಭಿಸಿದ್ದಾರೆ.
13 ಸ್ಥಾನಕ್ಕೆ ಚುನಾವಣೆ: 13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್‌ನಲ್ಲಿ ಎ ಮತ್ತು ಬಿ ತರಗತಿ ವಿಭಾಗದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಎ ತರಗತಿಯಡಿ 5 ಸ್ಥಾನ, ಬಿ ತರಗತಿಗೆ 8 ಸ್ಥಾನಗಳಿವೆ. ಈ 8 ನಿರ್ದೇಶಕ ಸ್ಥಾನಗಳ ಪೈಕಿ 2 ಸಾವಾನ್ಯ ಅಭ್ಯರ್ಥಿಗಳಿಗೆ,1 ಬಿಸಿಎಂ ಬಿ, 2 ಮಹಿಳಾ ಅಭ್ಯರ್ಥಿಗಳಿಗೆ, 1 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಉಳಿದಂತೆ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ಓರ್ವ ಹಾಗೂ ಸರ್ಕಾರದ ನಾಮನಿರ್ದೇಶನದ ಮೂಲಕ ಒಬ್ಬರು ನೇಮಕವಾಗಲಿದ್ದಾರೆ.
ಯಾರೆಲ್ಲಾ ಮತದಾನ ವಾಡಲಿದ್ದಾರೆ? ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಗಳಿಂದ ಎ ತರಗತಿಯ 5 ಸ್ಥಾನಗಳಿಗೆ 20 ಮತದಾನ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿದ್ದಾರೆ. ಮೂವರು ಪ್ರತಿನಿಧಿಗಳು ಆಡಳಿತಾಧಿಕಾರಿಗಳು ಇರುವುದರಿಂದ ಮತದಾನಕ್ಕೆ ಅವಕಾಶ ಇಲ್ಲದಂತಾಗಿದ್ದು, ಚುನಾವಣೆ ಪ್ರಕ್ರಿಯೆ ನಡೆದು ಆಡಳಿತ ಮಂಡಳಿ ರಚನೆಯಾದರೆ ಮತದಾನಕ್ಕೆ ಅವಕಾಶ ಸಿಗಲಿದೆ. ಬಿ ತರಗತಿಯ 8 ಸ್ಥಾನಗಳಿಗೆ ಸೊಸೈಟಿಗಳ ಷೇೀರುದಾರಾದ 5,571 ಜನ ಮತದಾನ ವಾಡಲು ಅರ್ಹರಾಗಿದ್ದಾರೆ.
ರಣಕಣವಾದ ಟಿಎಪಿಎಂಸಿಎಸ್ ಚುನಾವಣೆ: ತಾಲೂಕಿನಲ್ಲಿ ಬಿಜೆಪಿ ಶಾಸಕರು ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್‌ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಪ್ರತಿಷ್ಟೆ ಬಿಜೆಪಿ ನಾಯಕರಿಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗುವ ಮೂಲಕ ಪಕ್ಷ ಸಂಟನೆಗೆ ಈ ಚುನಾವಣೆಯನ್ನು ದಿಕ್ಸೂಚಿಯಾಗಿಸಿಕೊಳ್ಳುವ ತವಕ ಕಾಂಗ್ರೆಸ್‌ದ್ದಾಗಿದೆ, ಜೆಡಿಎಸ್‌ಗೆ ತಾಲೂಕಿನ ಗ್ರಾವಾಂತರ ಭಾಗದಲ್ಲಿ ಹೆಚ್ಚಿನ ಶಕ್ತಿಯಿದ್ದು ಪ್ರಾಬಲ್ಯ ಉಳಿಸಿಕೊಳ್ಳುವ ತವಕದಲ್ಲಿದೆ.
ವಾರ್ಷಿಕ 30 ಕೋಟಿ ರೂ.ವಹಿವಾಟು:
ಕಳೆದ ಸಾಲಿನಲ್ಲಿ ಟಿಎಪಿಎಂಸಿಎಸ್ ನಲ್ಲಿ ವಾರ್ಷಿಕ 30 ಕೋಟಿ ರೂಪಾಯಿ ವಹಿವಾಟು ನಡೆದಿದೆ. 45 ಲಕ್ಷ ರೂ.ಗಳ ಲಾಭಂಶದಲ್ಲಿ ಸೊಸೈಟಿ ನಡೆಯುತ್ತಿದೆ.
ಚುನಾವಣೆ ವೇಳಾಪಟ್ಟಿ:
ನಗರದ ಸರ್ಕಾರಿ ಪ್ರೌಢಶಾಲೆ( ಜೂನಿಯರ್ ಕಾಲೇಜು)ಯಲ್ಲಿ ನ.2 ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೂ ಮತದಾನ ನಡೆಯಲಿದ್ದು, ಮತದಾನ ಮುಗಿದ ಬಳಿಕ ಏಣಿಕೆ ವಾಡಿ ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಅ.23 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.25 ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಲಿದೆ, 26ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು,
27ರವರೆಗೆ ನಾಮಪತ್ರಗಳ ಹಿಂತೆಗೆತಕ್ಕೆ ಅವಕಾಶವಿದೆ. ನ.2ಂದು ಚುನಾವಣೆ ನಡೆಯಲಿದ್ದು ಅಂದೇ ಲಿತಾಂಶ ಪ್ರಕಟಕವಾಗಲಿದೆ.
ಎನ್‌ಡಿಎ ಮೈತ್ರಿಯಡಿ ಬಿಜೆಪಿ, ಜೆಡಿಎಸ್ ಒಂದಾಗಿ ಈ ಚುನಾವಣೆ ಎದುರಿಸುತ್ತೇವೆ. ನೂರಕ್ಕೆ ನೂರರಷ್ಟು ಎನ್‌ಡಿಎ ಸಂಪೂರ್ಣವಾಗಿ ಅಧಿಕಾರ ಹಿಡಿಯುವ ಭರವಸೆ ಇದೆ. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು.
ಧೀರಜ್ ಮುನಿರಾಜು, ಶಾಸಕ, ದೊಡ್ಡಬಳ್ಳಾಪುರ
----------
ರಾಜ್ಯ ಸರ್ಕಾರ ರೈತಪರವಾದ ಆಡಳಿತ ನೀಡುತ್ತಿದೆ. ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ತಾಲೂಕಿನ ಎಲ್ಲ ಮುಖಂಡರೊಂದಿಗೆ ಚರ್ಚೆ ವಾಡಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ವಾಡಲಾಗುವುದು. ಟಿಎಪಿಎಂಸಿಎಸ್ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲಾಗುವುದು.
ವೆಂಕಟರಮಣಯ್ಯ, ವಾಜಿ ಶಾಸಕ.