ಡಿಸಿಸಿ ಬ್ಯಾಂಕ್ ರಣಕಣಕ್ಕೆ ಜಾರಕಿಹೊಳಿ ಪುತ್ರರ ಪ್ರವೇಶ

image_editor_output_image-432575287-1760168822112.jpg
Published on

ದಿನದಿಂದ ದಿನಕ್ಕೆ ರಂಗೇರುತ್ತಿರುವ ಇಲ್ಲಿನ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಈಗ ಜಾರಕಿಹೊಳಿ‌ಕುಟುಂಬದ ಇಬ್ಬರು ಪುತ್ರರು ಪ್ರವೇಶ ಪಡೆದಿದ್ದಾರೆ.

ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಾರಕಿಹೊಳಿ ಸೋದರರು, ಪಕ್ಷ ಬದಿಗಿಟ್ಟು ತಮ್ಮದೇ ಬಣ ಮಾಡಿಕೊಂಡಿದ್ದಾರೆ. ಶನಿವಾರವಾರದವರೆಗೆ ಇವರ ಬಣದಿಂದ ಒಟ್ಟು 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು,  ಅದರಲ್ಲಿ ಇಬ್ಬರು ಜಾರಕಿಹೊಳಿ ಕುಟುಂಬದವರಿದ್ದಾರೆ‌.

ಗೋಕಾಕ‌ ಕ್ಷೇತ್ರದಿಂದ ಶಾಸಕ ರಮೇಶ ಜಾರಕಿಕೊಳಿ ಪುತ್ರ ಅಮರನಾಥ ಜಾರಕಿಹೊಳಿ ಹಾಗೂ ಬೆಳಗಾವಿ ತಾಲೂಕು ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ‌

ಇಬ್ಬರೂ ತಮ್ಮ ಚಿಕ್ಕಪ್ಪ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬ್ಯಾಂಕ್‌ಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net