ಹಮಾಮ್ ಡೇರಿಗೆ ನಂಜಪ್ಪ ಅಧ್ಯಕ್ಷ

dairy
election
Published on

ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ ಹೋಬಳಿಯ ಹಮಾಮ್ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಂಜಪ್ಪ ಮತ್ತು ಉಪಾಧ್ಯಕ್ಷರಾಗಿ ಟಿ.ತಿಮ್ಮರಾಜು ಆಯ್ಕೆಯಾದರು.
ಡೇರಿಯ ಕಚೇರಿಯಲ್ಲಿ ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚುನಾವಣಾಧಿಕಾರಿ ರಾಧಾಮಣಿ ಲಿತಾಂಶ ೋಷಿಸಿದರು.
ಒಟ್ಟು 12 ಮಂದಿ ನಿರ್ದೇಶಕರನ್ನು ಒಳಗೊಂಡ ಡೇರಿಯ ಆಡಳಿತ ಮಂಡಳಿಯಲ್ಲಿ ನಂಜಪ್ಪ ಮತ್ತು ಟಿ.ತಿಮ್ಮರಾಜು ತಲಾ 7 ಮತ ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ನಂಜಪ್ಪ ಮಾತನಾಡಿ, ಡೇರಿ ಸಾಕಷ್ಟು ಹಿಂದುಳಿದಿದ್ದು, ಮುಂದಿನ ದಿನಗಳಲ್ಲಿ ಬಮುಲ್ ಮತ್ತು ಕೆಎಂಎಫ್ ಅನುದಾನಗಳ ಸದ್ಬಳಕೆ ಮಾಡಿಕೊಂಡು ಡೇರಿಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ಊರಿನ ರೈತರು, ಮುಖಂಡರು ಮತ್ತು ನಿರ್ದೇಶಕರು ನಂಬಿಕೆಯಿಟ್ಟು ಆಯ್ಕೆ ಮಾಡಿದ್ದು, ಅವರೆಲ್ಲರ ಸಲಹೆ ಪಡೆದು ಡೇರಿ ಉನ್ನತಿಗೆ ಶ್ರಮಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net