ಶಿವಗಂಗೆ ಡೇರಿಗೆ ಶ್ರೀನಿವಾಸಮೂರ್ತಿ ಅಧ್ಯಕ್ಷ

shivagage
shivagange election
Published on

ದಾಬಸ್‌ಪೇಟೆ: ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶಿವಗಂಗೆಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ನರಸಮ್ಮ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಿಗದಿಗೊಂಡಿದ್ದ ಚುನಾವಣೆಯಲ್ಲಿ ಶ್ರೀನಿವಾಸಮೂರ್ತಿ 7ಮತ ಪಡೆದು ಗೆಲುವು ಸಾಧಿಸಿದರೆ, ಲಕ್ಷ್ಮೀನರಸಮ್ಮ ಅವರು 6ಮತ ಪಡೆದು ಉಪಾಧ್ಯಕ್ಷ ಗಾದಿ ಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net