ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

ಚಿತ್ರ 06ಎಸ್ ಡಿ ಪಿ 07
ಕೆಪಿಎಸ್ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸತೀಶ್‌ನಾರಾಯಣ್ ಹಾಗೂ ಸಂಘದ ಉಪಾಧ್ಯಕ್ಷರಾಗಿ ಅಫ್ಸಲ್ ಆಯ್ಕೆಯಾದರು.
Published on

ಸಿದ್ದಾಪುರ ;ನೆಲ್ಯಹುದಿಕೇರಿ ಕೆಪಿಎಸ್ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸತೀಶ್‌ನಾರಾಯಣ್ ಆಯ್ಕೆಯಾದರು.

ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಕೆಪಿಎಸ್ ಶಾಲಾ ಉಪಾಧ್ಯಕ್ಷ ಪಿ.ಕೆ.ಮುಸ್ತಫಾ ನೇತೃತ್ವದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಅಫ್ಸಲ್, ಕೋಶಾಧಿಕಾರಿಯಾಗಿ ಸಂಯುಕ್ತಾ, ಸಂಘಟನಾ ಕಾರ್ಯದರ್ಶಿಗಳಾಗಿ ಸುಜಾತಾ, ಬೆಳ್ಳಿಯಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ ಶುಭ, ವಿನೋದ್, ನಿಶಾ, ಜಿಶಾ ಆಯ್ಕೆಯಾದರು.

ಕೆಪಿಎಸ್ ಶಾಲೆಯ ಪ್ರಾಂಶುಪಾಲ ಆಲ್ವರೀಸ್, ಉಪಪ್ರಾಂಶುಪಾಲ ಅನಿಲ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಭಾರತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net