

ಹುಬ್ಬಳ್ಳಿ: ನಗರದ ಮಹಾರಾಜ ಅಗ್ರಸೇನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಮಿತ ಮಹಾಜನ ಹಾಗೂ ಉಪಾಧ್ಯಕ್ಷರಾಗಿ ಭರತಭೂಷಣ ಬನ್ಸಲ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಈ ಆಯ್ಕೆ ನಡೆದಿದೆ.
ನಿರ್ದೇಶಕರಾಗಿ ಸುಭಾಶ ಮಹಾಜನ, ಸುರೇಶ ಅಗರ್ವಾಲ, ಮುಕೇಶ ಅಗರ್ವಾಲ, ಸುಜೀತ ಯಾದುಕಾ, ಭಾರತಿ ಮಹಾಜನ, ಅಶೋಕಕುಮಾರ ಮಹಾಜನ, ಹೇಮಂತ ಮೋದಿ, ಕೇದಾರ ಅಗರ್ವಾಲ, ಅನಿತಾ ಮಹಾಜನ ಸಹ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಸಂಘಗಳ ಧಾರವಾಡ ಉಪ ವಿಭಾಗದ ನಿಬಂಧಕರ ಕಚೇರಿಯ ಸಲೀಂ ಮುಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸೊಸೈಟಿಯ ವ್ಯವಸ್ಥಾಪಕ ಎಲ್.ಎಸ್.ಬೋಗಾರ ಹಾಗೂ ಸಿಬ್ಬಂದಿ ಇದ್ದರು.