

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ವಿದ್ಯಾಗಿರಿ ಲಕ್ಷ್ಮೀನಗರದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹಾಗೂ ಲಕ್ಷ್ಮೀನಗರ ನಾಗರಿಕ ಹಿತರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅರುಣ ಅಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯ ಗಿರಿಯಮ್ಮನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಎಸ್.ಜಿ. ದೊಡವಾಡ, ಉಪಾಧ್ಯಕ್ಷರಾಗಿ ಎಲ್.ವೈ. ಬೈಲಗಾಣದವರ, ಕೋಶಾಧ್ಯಕ್ಷರಾಗಿ ಎಸ್.ಆರ್. ಗಂಗಾ ಆಯ್ಕೆಯಾದರು.
ಸದಸ್ಯರಾಗಿ ಡಾ.ಎಂ.ವೈ. ಸಾವಂತ, ಬಸವರಾಜ ತಾಳಿಕೋಟೆ, ಸಂಜೀವ ಕುಲಕರ್ಣಿ, ಬಿ.ಎಸ್. ಹಲಕರ್ಣಿಮಠ, ಬಿ.ವೈ. ಪೂಜಾರ, ರಾಜು ರಾವ್, ಎಸ್.ಎಸ್. ಹಿರೇಮಠ, ಎಂ.ಎಸ್. ಲಿಂಗದಾಳ, ಸತೀಶ ರಾಗಿ, ರಾಜಶೇಖರ ಕಲಮಂಗಿ, ಗುಣಕರ ಶೆಟ್ಟಿ, ಪ್ರದೀಪ ದೇವರಮನಿ ಆಯ್ಕೆಯಾಗಿದ್ದಾರೆ.