ಬೆಳಕವಾಡಿ ಬಿ.ಆರ್.ಅಂಬೇಡ್ಕರ್ ಯುವಕ ಸಂಘಕ್ಕೆ ಆಯ್ಕೆ

21 mlv 1
ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದ ಎನ್.ಪ್ರತಾಪ್, ಎಂ.ಪ್ರಸಾದ್, ಎಸ್.ಅಜಯ್, ಅಮೃತ, ವಿ.ಚಂದ್ರು ಇತರರನ್ನು ಗ್ರಾಮದ ಯಜಮಾನರು ಹಾಗೂ ಮುಖಂಡರು ಅಭಿನಂದಿಸಿದರು.
Published on

ಮಳವಳ್ಳಿ: ತಾಲೂಕಿನ ಬೆಳಕವಾಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘಕ್ಕೆ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಸಭೆ ಭಾನುವಾರ ಆಯೋಜಿಸಲಾಗಿತ್ತು.

ಅಧ್ಯಕ್ಷರಾಗಿ ಎನ್.ಪ್ರತಾಪ್, ಉಪಾಧ್ಯಕ್ಷರಾಗಿ ಎಂ.ಪ್ರಸಾದ್, ಖಜಾಂಚಿಯಾಗಿ ಎಸ್.ಅಜಯ್, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ, ಸಂಘಟನ ಕಾರ್ಯದರ್ಶಿಯಾಗಿ ವಿ.ಚಂದ್ರು, ನಿರ್ದೇಶಕರಾಗಿ ಕೃಷ್ಣಮೂರ್ತಿ, ಪ್ರೇಮ್‌ಕುಮಾರ್, ಮಹದೇವಸ್ವಾಮಿ, ಚೇತನ್, ಪರಮೇಶ್, ಶ್ರೀಧರ್, ರಂಗಸ್ವಾಮಿ ಆಯ್ಕೆಯಾದರು.

ಸಲಹಾ ಸಮಿತಿಗೆ ರಂಗಸ್ವಾಮಿ, ಬಿ.ಮಹದೇವಸ್ವಾಮಿ, ಬಿ.ಎಂ. ಕಾಂತರಾಜು, ಎಸ್.ಪ್ರಶಾಂತ್, ಬಿ.ಎಂ.ಮಧುಸೂದನ್, ನಾಗಮರಿ, ಮಹದೇವಪ್ಪ, ವಿನುಕುಮಾರ್, ಹೇಮಂತ್, ಅಭಿಲಾಷ್, ಮಹದೇವಸ್ವಾಮಿ, ವಿಜಯಕುಮಾರ್, ನಂಜುಂಡಸ್ವಾಮಿ, ರಾಜೇಂದ್ರ, ಬಿ.ಎಂ.ಮಧುಸೂದನ್, ಬಿ.ಕೆ.ಕುಮಾರ್, ಬಿ.ಎಂ.ಸೋಮಶೇಖರ್, ಮಹದೇವಸ್ವಾಮಿ (ಬಿಎಂಟಿಸಿ) ಅವರನ್ನು ಒಮ್ಮತದ ನಿರ್ಣಯದ ಮೂಲಕ ಆಯ್ಕೆ ಮಾಡಲಾಯಿತು.

ಯಜಮಾನ್ ಮರಿಮಾದಯ್ಯ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಬಿ.ಕೆ.ಶಿವಸ್ವಾಮಿ, ಗ್ರಾ.ಪಂ. ಸದಸ್ಯ ಚೇತನ್‌ಕುಮಾರ್, ಪ್ರವೀಣ್, ಮನು, ಅಜಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net