ಬನ್ನೂರ ಗ್ರಾಪಂಗೆ ಗಿರಿಜವ್ವ ಅಧ್ಯಕ್ಷೆ, ರೇಣುಕಾ ಉಪಾಧ್ಯಕ್ಷೆ

bannur gram panchayat
Published on

ಶಿಗ್ಗಾಂವಿ: ತಾಲೂಕಿನ ಬನ್ನೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಿರಿಜವ್ವ ದೊಡ್ಮನಿ, ಉಪಾಧ್ಯಕ್ಷರಾಗಿ ರೇಣುಕಾ ಬಿಶೆಟ್ಟಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

17 ಸದಸ್ಯ ಬಲ ಹೊಂದಿರುವ ಬನ್ನೂರ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಅ ವರ್ಗ ಮಹಿಳೆಗೆ ಮೀಸಲಾಗಿತ್ತು. ಮಂಗಳವಾರ ನಿಗದಿಯಾಗಿದ್ದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಗಿರಿಜವ್ವ ದೊಡ್ಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಬಿಶೆಟ್ಟಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಯಿತು. ಚುನಾವಣೆ ಅಧಿಕಾರಿ ಎಂ.ಬಿ. ಅಂಬಿಗೇರ ಕಾರ್ಯನಿರ್ವಹಿಸಿದರು.

ನಂತರ ಜರುಗಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಸದಸ್ಯರಾದ ವೀರಭದ್ರಪ್ಪ ಅಗಡಿ, ನಿಂಗಪ್ಪ ದುಂಡಪ್ಪನವರ, ಶಂಕ್ರಪ್ಪ ಬಟ್ಟಿ, ಯಶೋದಾ ಹಡಪದ, ರಮೇಶ ಹೊಸಪೇಟೆ, ದುರ್ಗಪ್ಪ ಹರಿಜನ, ಸರೋಜಾ ಗೊಬ್ಬಿ, ಶಿವಾನಂದ ಬಿಶೆಟ್ಟಿ, ರೇಣುಕಾ ತಳವಾರ, ಖಾದರಬೀ ದೊಡ್ಮನಿ, ಪುಷ್ಪಾ ಪೊಲೀಸಗೌಡ್ರ, ಮುನೀರ ಅಹ್ಮದ್ ಶೇತಸನದಿ, ಫಕ್ರುದ್ದೀನ್ ಹಕ್ಕಿಯವರ, ಚಂದ್ರಕಲಾ ಪೊಲೀಸಗೌಡ್ರ, ಪಿಡಿಒ ಬಸವರಾಜ ಪೂಜಾರ, ಗ್ರಾಪಂ ಕಾರ್ಯದರ್ಶಿ ಎಂ.ಕೆ. ಹೂಗಾರ, ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net