

ಪುತ್ತೂರು ಗ್ರಾಮಾಂತರ: ಅರಣ್ಯ ಇಲಾಖೆಯ ಪುತ್ತೂರು ವಲಯದ ಬಲ್ನಾಡು ಗ್ರಾಮ ಅರಣ್ಯ ಸಮಿತಿಯ ಮುಂದಿನ 5 ವರ್ಷದ ಅವಧಿಯ ಕಾರ್ಯಕಾರಿಣಿ ಅಧ್ಯಕ್ಷರಾಗಿ ರಾಧಾಕೃಷ್ಣ ಆಳ್ವ ಸಾಜ ಆಯ್ಕೆಗೊಂಡಿದ್ದಾರೆ. ಬಲ್ನಾಡು ಗ್ರಾಮದ ಸಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಲ್ನಾಡು ಗ್ರಾಮ ಅರಣ್ಯ ಸಮಿತಿಯ ನೂತನ ಕಾರ್ಯಕಾರಿಣಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಕಂದಾಯ ನಿರೀಕ್ಷಕ ಕೆ.ಟಿ.ಗೋಪಾಲ ನೇತೃತ್ವದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಹಾಗೂ ಬಲ್ನಾಡು ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿ ವೀರಣ್ಣ ಉಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕಾರಿಣಿ ಸದಸ್ಯರಾಗಿ ಚಂದಪ್ಪ ಪೂಜಾರಿ ಕೆ., ಸುಂದರ ಎಂ., ಕುಟ್ಟಿ ನಲಿಕೆ, ಕೆ.ಪ್ರವೀಣಚಂದ್ರ ಆಳ್ವ, ಅಣ್ಣಿ ಪೂಜಾರಿ ಸಾರ್ಯ, ಉಷಾ ಸಾಜ, ಕಮಲಾಕ್ಷಿ ಸಾಜ, ವಸಂತಿ ಸಾಜ, ನಳಿನಿ ಕೆ. ಮತ್ತು ಕುಸುವಾ ಎಂ. ಆಯ್ಕೆಯಾದರು.