ಸಂಘದ ಶ್ರೇಯೋಭಿವೃದ್ಧಿಗೆ ದುಡಿಯೋಣ

elected
elected
Published on

ಸೂಲಿಬೆಲೆ: ಯಾವುದೇ ಸಂಘ-ಸಂಸ್ಥೆಗಳು ಏಳಿಗೆ ಕಾಣಬೇಕಾದರೆ ಪರಸ್ಪರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಬೆಂಡಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 4ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾತನಾಡಿದರು.
ಸಂಘದ ಶ್ರೇಯೋಭಿವೃದ್ಧಿಗೆ ಒಗ್ಗಟ್ಟಾಗಿ ದುಡಿಯೋಣ. ಸಂಘದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಸಂಘದ ಮಾಜಿ ನಿರ್ದೇಶಕ ಬಿ.ಸಿ.ಶಂಕರೇಗೌಡ ಮಾತನಾಡಿ, ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬಿ.ವಿ.ಸತೀಶಗೌಡರು ಸದಾ ಸಂಘದ ಏಳಿಗೆಗೆ ಶ್ರಮಿಸುತ್ತಾರೆ. ಪ್ರಸಕ್ತ ಸಾಲಿನಲ್ಲಿ ಡೇರಿಯು ಲಾಭದತ್ತ ಸಾಗುತ್ತಿದ್ದು, ಸದಾ ಸಂಘದ ಏಳಿಗೆಗೆ ಶ್ರಮಿಸುತ್ತಾರೆ ಎಂದರು.
ಸಂಘದ ನೂತನ ಅಧ್ಯಕ್ಷರಾಗಿ ಬಿ.ವಿ.ಸತೀಶಗೌಡ, ನಿರ್ದೇಶಕರಾಗಿ ಬಿ.ಎನ್.ರಾಮಯ್ಯ, ಬಿ.ಸಿ.ಶಂಕರೇಗೌಡ, ಬಿ.ಜಿ.ಕೃಷ್ಣಪ್ಪ, ಬಿ.ಎನ್.ನಂಜೇಗೌಡ, ಬಿ.ಆರ್.ಸುರೇಶ್, ಬಿ.ಎನ್.ವೆಂಕಟೇಶ್, ಬಿ.ವಿ.ಮಂಜೇಶ್, ಬಿ.ಎನ್.ನಾರಾಯಣಸ್ವಾಮಿ, ಬಿ.ಎನ್.ರಮೇಶ್, ಲಲಿತಮ್ಮ, ಉಮಾ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ನಿಬಂಧಕ ಕಚೇರಿಯ ನಾಗರಾಜ್ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಉಪ ಚುನಾವಣಾಧಿಕಾರಿ ಲೋಕೇಶ್‌ಬಾಬು ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net