ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ, ಸಚಿವ ಸ್ಥಾನದ ಆಸೆ ಇಲ್ಲ

IMG-20250303-WA0030.jpg
Published on

ಚಿಕ್ಕಬಳ್ಳಾಪುರ: ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವುದರಿಂದ ಸಚಿವ ಸ್ಥಾನದ ಆಸೆ ಇಲ್ಲ ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಜಡಲತಿಮ್ಮನಹಳ್ಳಿಯಲ್ಲಿ ಕೈಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈಗಲೇ ಸಚಿವನಾಗಬೇಕೆಂಬ ಆಸೆ ಇಲ್ಲ. ಇದನ್ನು ಮೊನ್ನೆ ಗೆದ್ದು ಬಂದು ಕೇಳುವುದಕ್ಕೆ ಆಗುವುದಿಲ್ಲ.  ಇನ್ನು ೫ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಜವಾಬ್ದಾರಿಯನ್ನು ನಿರ್ವಹಿಸಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾ ರಾಮಯ್ಯ ಪಕ್ಷ ಸಂಟನೆಗೆ ಶ್ರಮಿಸಿದ್ದಾರೆ. ಇವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ, ಸಚಿವ ಸ್ಥಾನವನ್ನು ನೀಡಲಿ ಎಂದು ಶಾಸಕರು ತಿಳಿಸಿದ್ದಾರೆ.
*ಕಾಮಗಾರಿ ಗುಣಮಟ್ಟ ಕಾಪಾಡಿ
ಅಭಿವೃದ್ಧಿಯ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಶಾಸಕರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದರಿಂದ ಹೆಚ್ಚಿನ ಜನಸಂಪರ್ಕದಲ್ಲಿ ಹಳ್ಳಿಗಳು ಪ್ರಗತಿಯನ್ನು ಕಾಣಲು ಸಹಕಾರಿಯಾಗುತ್ತದೆ. ಇದೇ ವೇಳೆ ಕಾಮಗಾರಿಗಳನ್ನು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗಿರುವುದು ಮುಖ್ಯ ಎಂದು ತಿಳಿಸಿದ್ದಾರೆ.

*ತೀರ್ಮಾನ ಅಂತಿಮ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಲಾ ಭವನಕ್ಕೆ ಕನ್ನಡ ಭವನ ಎಂಬುದಾಗಿ ಸರ್ಕಾರವು ಆದೇಶಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ತೀರ್ಮಾನವೇ ಅಂತಿಮ. ಇದರಲ್ಲಿ ಬದಲಾವಣೆ ಇಲ್ಲ. ಒಂದು ಸಮುದಾಯ ಹಾಗೂ ಸ್ವಹಿತಾಸಕ್ತಿಗಿಂತಲೂ ಅವರ ನಿರ್ಧಾರವೇ ಫೈನಲ್. ಇದರಿಂದ ಅನಗತ್ಯ ಚರ್ಚೆಬೇಕಾಗಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net