ಗುತ್ತಲ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಯ್ಕೆ

elected for Guthal Milk Producers Cooperative Society
Published on

ಗುತ್ತಲ: ಪಟ್ಟಣದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಶನಿವಾರ ಆಯ್ಕೆಯಾದರು. ಅಧ್ಯಕ್ಷರಾಗಿ ಬಸವರಾಜ ದುರಗಪ್ಪ ಪಸಗಿ, ಉಪಾಧ್ಯಕ್ಷರಾಗಿ ಅಜ್ಜಪ್ಪ ಬಸಪ್ಪ ಅಕ್ಕಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಪಸಗಿ ಹಾಗೂ ಬಿಜೆಪಿ ಬೆಂಬಲಿತ ಮಂಜುನಾಥ ಹಾವೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಜ್ಜಪ್ಪ ಅಕ್ಕಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಂಜುನಾಥ ಹಾವೇರಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಧ್ಯಕ್ಷರಾಗಿ ಬಸವರಾಜ ಪಸಗಿ ಹಾಗೂ ಉಪಾಧ್ಯಕ್ಷರಾಗಿ ಅಜ್ಜಪ್ಪ ಅಕ್ಕಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ವೆಂಕಟೇಶ ಬೆಳವಿಗಿ ಘೊಷಿಸಿದರು.

ನಂತರ ಕಾಂಗ್ರೆಸ್ ಕಾರ್ಯಕರ್ತರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಸಿ.ಬಿ. ಕುರವತ್ತಿಗೌಡರ, ಪಪಂ ಸದಸ್ಯ ಅಜಯ ಬಂಡಿವಡ್ಡರ, ಖಲೀಲಅಹ್ಮದ ಖಾಜಿ, ಪಿ.ಎನ್. ಹೇಮಗಿರಿಮಠ, ಗುಡ್ಡಪ್ಪ ಗೊರವರ, ಚನ್ನಪ್ಪ ಬನ್ನಿಮಟ್ಟಿ, ನಾಗರಾಜ ಕೋಣನವರ, ಬಸವರಾಜ ಕೆಂಚಮಲ್ಲ, ಚಂದ್ರಪ್ಪ ಗಡ್ಡಿ, ಪ್ರಕಾಶಸಿಂಗ್ ಜಮಾದಾರ, ನಾಗಪ್ಪ ಶೀತಾಳದ, ನಾಗಪ್ಪ ಗಂಗಣ್ಣನವರ, ನಾಗರತ್ನಾ ಹಾದಿಮನಿ, ಬಸಣ್ಣ ಇಚ್ಚಂಗಿ, ಗುರುರಾಜ ಹಾದಿಮನಿ, ಅಜ್ಜಪ್ಪ ಹೂಗಾರ, ಫಾಲಾಕ್ಷಯ್ಯಸ್ವಾಮಿ ನೆಗಳೂರಮಠ, ಶೇಖಪ್ಪ ಸಾಲಗೇರಿ, ಶೇಖಪ್ಪ ಕೆಂಚಮಲ್ಲ, ಹಾಲೇಶ ಬನ್ನಿಮಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net