ಮಾರನಬೀಡ ಗ್ರಾಪಂ ಅಧ್ಯಕ್ಷರಾಗಿ ಈರಪ್ಪ ಜಾಡರ ಆಯ್ಕೆ

gram panchayat
Published on

ಹಾನಗಲ್ಲ: ತಾಲೂಕಿನ ಮಾರನಬೀಡ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈರಪ್ಪ ಜಾಡರ 9 ಮತ ಪಡೆದು ಮೂಲಕ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಹದೇವಪ್ಪ ಸಂಶಿ 6 ಮತ ಪಡೆದು ಪರಾಭವಗೊಂಡರು. ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಗೀನಾ ನವೀದ್‌ಅಲಿ ಹರವಿ ಅವಿರೋಧವಾಗಿ ಆಯ್ಕೆಗೊಂಡರು. ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗ್ರಾಪಂ ಸದಸ್ಯರಾದ ವೀರಣ್ಣ ಮರೂಡಿ, ಬಸಪ್ಪ ವಡ್ಡರ, ಪ್ರೇಮಾ ನರೇಗಲ್, ಸವಿತಾ ಬೈಲವಾಳ, ಖಾಜಾಬಿ ಬಾವನವರ, ಮರೆಂಬಿ ಓಲೇಕಾರ, ಮುಖಂಡರಾದ ಪುಟ್ಟಪ್ಪ ನರೇಗಲ್, ಇಸ್ಮಾಯಿಲ್ ನದಾಫ್, ಶಂಕರಗೌಡ ಪಾಟೀಲ, ಯಲ್ಲಪ್ಪ ನೆರ್ಕಿಮನಿ, ಮಂಜಪ್ಪ ಹರ್ಲಾಪೂರ, ರುದ್ರಪ್ಪ ಡಾಂಗೆ, ಸಿದ್ದಪ್ಪ ಚೆಂಗಳೆಮ್ಮನವರ, ಮಲ್ಲಪ್ಪ ಕರಿಯಪ್ಪನವರ, ಯಲ್ಲಪ್ಪ ಹಾನಗಲ್, ಬಸವರಾಜ ಕೇಮಾಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net