

ತಿ.ನರಸೀಪುರ: ತಾಲೂಕಿಗೆ ಬನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಯುವ ಘಟಕದ ಅಧ್ಯಕ್ಷರ ಆಯ್ಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನೂತನ ಅಧ್ಯಕ್ಷರಾಗಿ ಮೊಹಮ್ಮದ್ ವಸೀಮ್ ಅವರು ಪ್ರತಿಸ್ಪರ್ಧಿ ಎ.ಎನ್.ಮಹೇಶ್ ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.
ಪಕ್ಷದಲ್ಲಿ ಯುವ ನಾಯಕತ್ವವನ್ನು ಗುರುತಿಸಲು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರ ಆಯ್ಕೆ ಮೊದಲ ಬಾರಿಗೆ ಆನ್‌ಲೈನ್ ಚುನಾವಣೆ ಕಳೆದ 2024ರ ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡು ತಿಂಗಳ ಕಾಲ ನಡೆಯಿತು. ಪಕ್ಷದ ಯುವ ಸಮೂಹ ಆನ್‌ಲೈನ್ ಮೂಲಕ ಮತವನ್ನು ಚಲಾವಣೆ ಮಾಡಿದ್ದರು. ಫೆ.7ರ ಸಂಜೆ ಪ್ರಕಟಗೊಂಡ ಫಲಿತಾಂಶದಲ್ಲಿ ಮೊಹಮ್ಮದ್ ವಸೀಮ್ 738 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, ಎ.ಎನ್.ಮಹೇಶ್ 9 ಮತಗಳನ್ನು ಪಡೆದು ಸೋಲನುಭವಿಸಿದರು.