ಉದಯ್ ಕುಮಾರ್ ಗೌಡ ಕೌಕ್ರಾಡಿ ಗ್ರಾಪಂ ಅಧ್ಯಕ್ಷ

New Project (47)
Published on

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮುಂದಿನ ಒಂದು ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ಸದಸ್ಯ ಉದಯ ಕುಮಾರ್ ಗೌಡ ದೋಂತಿಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಕೇಶ್ ಬಾಣಜಾಲ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜ.20ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಾಮಾನ್ಯ ಸ್ಥಾನಕ್ಕೆ ದೊಂತಿಲ 3ನೇ ವಾರ್ಡ್‌ನಿಂದ ಚುನಾಯಿತರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಉದಯ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಲೋಕೇಶ್ ಬಾಣಜಾಲ್ ಜನಾರ್ದನ ಕಾಪಿನ ಬಾಗಿಲು, ಭವಾನಿ ಗುಂಡಿ, ಮಹೇಶ್ ಪಟ್ಲಡ್ಕ, ಸುಧಾಕರ್ ಗುತ್ತಿನ ಮನೆ, ಸವಿತ ಎಸ್ ಹೊಸಮನೆ, ಪುಷ್ಪ, ವಿಶ್ವನಾಥ ಗೌಡ ಕೊರಮೇರು, ರೋಯಿ ಟಿ. ಎಂ, ದಿನೇಶ್, ದೇವಕಿ, ಹನೀಫ್ ಎಂ, ಶೈಲಾ ಉಪಸ್ಥಿತರಿದ್ದರು. ಮೂವರು ಸದಸ್ಯರು ಗೈರು ಹಾಜರಾಗಿದ್ದರು. ಕಡಬ ಉಪತಹಸೀಲ್ದಾರ್ ಸಯ್ಯದುಲ್ಲಾ ಖಾನ್, ಚುನಾವಣಾ ವಿಷಯ ನಿರ್ವಾಹಕ ಆತ್ಮಾನಂದ, ಕೌಕ್ರಾಡಿ ಪ್ರಭಾರ ಪಿಡಿಒ ದೇವಿಕಾ ಹಾಗೂ ಪಂಚಾಯಿತಿ ಸಿಬ್ಬಂದಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net