ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆ

Bel_Prasad Elinje
Published on

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಹಾಗೂ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪತ್ರಿಕಾ ಭವನದಲ್ಲಿ ಶನಿವಾರ ನಡೆಯಿತು. ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಏಣಿಂಜೆ, ಕಾರ್ಯದರ್ಶಿ ತುಕರಾಮ್ ಬಿ., ಉಪಾಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಕೋಶಾಧಿಕಾರಿ ಜಾರಪ್ಪ ಪೂಜಾರಿ ಬೆಳಾಲು, ಜತೆ ಕಾರ್ಯದರ್ಶಿಯಾಗಿ ಧನಕೀರ್ತಿ ಆರಿಗ ಧರ್ಮಸ್ಥಳ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯನ್ನು ಸಂಘದ ಹಿರಿಯ ಸದಸ್ಯ, ಆರ್.ಎನ್.ಪೂವಣಿ ನಡೆಸಿಕೊಟ್ಟರು. ಕಾರ್ಯದರ್ಶಿ ಗಣೇಶ್ ಬಿ.ಶಿರ್ಲಾಲು ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.

ಸಂಘದ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷ ಶಿಬಿ, ಜತೆ ಕಾರ್ಯದರ್ಶಿ ಮನೋಹರ್ ಬಳಂಜ, ಜಿಲ್ಲಾ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಸಂಘದ ಸದಸ್ಯರಾದ ಬಿ.ಎಸ್.ಕುಲಾಲ್, ಮಂಜುನಾಥ ರೈ, ದೀಪಕ್ ಅಠವಳೆ, ಅಚ್ಚುಶ್ರೀ ಬಾಂಗೇರು, ಅರವಿಂದ ಹೆಬ್ಬಾರ್, ಹೃಷಿಕೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net