

ಗುರುಪುರ : ಮಂಗಳೂರು ತಾಲೂಕಿನ ಕುಳವೂರು ಬೊಳಿಯ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ನೂತನ ಅಧ್ಯಕ್ಷರಾಗಿ ಗಂಗಾಧರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶೀಲಾ ಹಾಗೂ ಸದಸ್ಯರಾಗಿ ಹರ್ಷಿಣಿ, ಶೇಖರ, ಜಯಂತ, ರಮೀಜಾ, ಮಲ್ಲಿಕಾ, ನವೀನ್, ನಮಿತಾ, ನಳಿನಿ, ಜಯಂತಿ, ಸುಗಂಧಿ, ಧನವಂತಿ, ಶೋಭಾ, ವನಿತಾ, ಹರಿಣಾಕ್ಷಿ, ಪುಷ್ಪಾವತಿ ಮತ್ತು ಶೋಭಾ ಆಯ್ಕೆಯಾಗಿದ್ದಾರೆ. ನಾಮ ನಿರ್ದೇಶಿತ ಸದಸ್ಯರಾಗಿ ಮುತ್ತೂರು ಗ್ರಾಪಂ ಉಪಾಧ್ಯಕ್ಷೆ ಸುಷ್ಮಾ ಆಯ್ಕೆಯಾಗಿದ್ದಾರೆ.