

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ 54ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ದಿನೇಶ್ ಮೊಗ್ರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಯಶೋಧಕೃಷ್ಣ ನೂಚಿಲ, ಭರತ್ ನೆಕ್ರಾಜೆ, ವಿನ್ಯಾಸ್ ಹೊಸೋಳಿಕೆ, ನಿತೀನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್ ಆಯ್ಕೆಯಾಗಿದ್ದಾರೆ. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು ರಾಜೇಶ್ ಎನ್.ಎಸ್.ಸಮಿತಿ ಸಂಚಾಲಕರಾಗಿ ಮುಂದುವರಿದಿದ್ದಾರೆ. 53ನೇ ವರ್ಷದ ಅಧ್ಯಕ್ಷ ದಿನೇಶ್ ಸಂಪ್ಯಾಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ದೀಪಕ್ ನಂಬಿಯಾರ್( ಕಾರ್ಯದರ್ಶಿ), ರತ್ನಾಕರ ಸುಬ್ರಹ್ಮಣ್ಯ(ಶಾಶ್ವತ ಕಾರ್ಯದರ್ಶಿ), ಹರಿಪ್ರಸಾದ್ ನಾಯರ್ ಮಲ್ಲಾಜೆ (ಕೋಶಾಧಿಕಾರಿ), ಶ್ರೀಕೃಷ್ಣ ಶರ್ಮ (ಶಾಶ್ವತ ಕೋಶಾಧಿಕಾರಿ), ಮನೋಜ್ ಕುಮಾರ್ ಎಸ್., ಗಿರೀಶ್ ಆಚಾರ್ಯ ಪೈಲಾಜೆ, ಜಯರಾಮ ಎಚ್.ಎಲ್.(ಜತೆ ಕಾರ್ಯದರ್ಶಿಗಳು), ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ದೇವಿಚರಣ್ ಕಾನಡ್ಕ (ಸಹಾಯಕ ಕೋಶಾಧಿಕಾರಿ) ನೇಮಕಗೊಂಡರು.