

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳೇರಿಯ ಮಿಂಚಿಪದವು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಮನೆಗೆ ನುಗ್ಗಿ ಮನೆಯೊಳಗಿದ್ದ 78ರ ಹರೆಯದ ವೃದ್ಧೆಯನ್ನು ಬಿಗಿದಪ್ಪಿ ವಿಕೃತಿ ಮೆರೆದ ಯುವಕನನ್ನು ಸ್ಥಳೀಯ ನಿವಾಸಿಗಳ ಸಹಾಯದಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಇಲ್ಲಿನ ಮಿಂಚಿಪದವು ನಿವಾಸಿ ವಸಂತ(35) ಬಂಧಿತ. ಆದೂರು ಠಾಣೆ ಎಸ್‌ಐ ವಿನೋದ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಮನೆಯೊಳಗಿಂದ ಬೊಬ್ಬಿಡುವುದನ್ನು ಕೇಳಿದ ಸ್ಥಳಿಯರು ಆಗಮಿಸುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಆದೂರು ಠಾಣೆಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ನಡೆಸಿದ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.