ಬಸ್ ಹಾಯ್ದು ವೃದ್ಧೆ ಸಾವು

Published on

ಭಟ್ಕಳ: ಖಾಸಗಿ ಬಸ್ ಹಾಯ್ದು ವೃದ್ಧೆಯೊಬ್ಬಳು ಮೃತಪಟ್ಟ ಘಟನೆ ಪಟ್ಟಣದ ಶಂಸುದ್ದೀನ್ ಸರ್ಕಲ್ ಬಳಿ ನಡೆದಿದೆ.

ಶಿರಾಲಿ ಚಿತ್ರಾಪುರ ನಿವಾಸಿ ಲಕ್ಷ್ಮೀ ಜಟ್ಟ ನಾಯ್ಕ (70) ಮೃತರು. ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಶಂಸುದ್ದೀನ್ ಸರ್ಕಲ್‌ನಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ವೃದ್ಧೆಯ ಮೇಲೆ ಹರಿದ ಪರಿಣಾಮ ಒಂದು ಕಾಲು ಸಂಪೂರ್ಣ ಜಜ್ಜಿ ಹೋಗಿತ್ತು. ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ವೃದ್ಧೆ ಮೃತಪಟ್ಟಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net