

ಇಂಡಿ: ರಾಜ್ಯ ರೈತ ಸಂಟನೆ ಹಾಗೂ ಹಸಿರು ಸೇನೆ ಅಧ್ಯ ಚಂದ್ರಶೇಖರ್ ಕೋಡಿಹಳ್ಳಿ ಅವರು ಇಂಡಿ ತಾಲೂಕಿನ ತೇನ್ನಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಿದ ಪ್ರಯುಕ್ತ ಮಂಗಳವಾರ ಚರ್ಚೆ ನಡೆಸಿದರು.
ಹಲವು ರೈತರು ಮಾತನಾಡಿ, ನಮ್ಮ ಜಮೀನಿನ ಪಹಣಿಗಳಲ್ಲಿ ಕಾಲಂ ನಂಬರ್ 9 ಹಾಗೂ 11ರಲ್ಲಿ ವಕ್ಫ್ ಬೋರ್ಡ್ ಎಂಬ ಹೆಸರು ಬಂದಿದೆ. ಇದರಿಂದ ನಮಗೆ ಸಾಲ ಸಹ ಸಿಗುವುದಿಲ್ಲ, ಅಲ್ಲದೆ ಇದು ನಮ್ಮ ಹಿರಿಯರ ಆಸ್ತಿಯಾಗಿದ್ದು, ಇದನ್ನು ನಾವು ದಾನವನ್ನೂ ಕೊಟ್ಟಿಲ್ಲ, ಮಾರಾಟವನ್ನೂ ಮಾಡಿಲ್ಲ. ಆದರೂ ಸಹ ನಮ್ಮ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂಬ ಹೆಸರು ಬಂದಿದೆ. ಈ ಕುರಿತು ತಹಸೀಲ್ದಾರ್ ಅವರನ್ನು ಕೇಳಿದರೆ ಅವರು ಸಹ ಸಮರ್ಪಕ ಉತ್ತರ ನೀಡುತ್ತಿಲ್ಲ, ಏನು ಮಾಡಬೇಕು ಎಂಬುದೇ ನಮಗೆ ತಿಳಿಯುತ್ತಿಲ್ಲ ನಮ್ಮ ಜಮೀನನ್ನು ನಮಗೆ ಉಳಿಸಿಕೊಡಿ ಎಂದು ಅಳಲು ತೋಡಿಕೊಂಡರು.
ಹಸಿರುಸೇನೆ ಜಿಲ್ಲಾ ಅಧ್ಯ ಎಸ್.ಬಿ. ಕೆಂಭೋಗಿ ಮಾತನಾಡಿ, ಸರ್ಕಾರ, ಜನಪ್ರತಿನಿಧಿಗಳು ರೈತರನ್ನು ಈ ದೇಶದ ಬೆನ್ನೆಲುಬು ಎಂದು ಕೇವಲ ಭಾಷಣಗಳಲ್ಲಿ ಹೇಳುತ್ತಾರೆ, ಆದರೆ ನೈಜವಾಗಿ ರೈತರ ವಿರುದ್ಧವಾಗಿರುತ್ತಾರೆ ಎನ್ನುವುದಕ್ಕೆ ಈಗ ನಡೆಯುತ್ತಿರುವ ವಕ್ಫ್ ಬೋರ್ಡ್ ಹೆಸರು ಸೇರಿಸುತ್ತಿರುವ ಪ್ರಸಂಗವೇ ನಿದರ್ಶನವಾಗಿದೆ. ಇನ್ನಾದರೂ ರೈತರು ಎಚ್ಚೆತ್ತುಕೊಂಡು ಸರ್ಕಾರದ ನಿಲುವು ಖಂಡಿಸಿ ಪ್ರತಿಭಟನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ನಮ್ಮ ರೈತರ ಜಮೀನು ಶ್ರೀವೇ ಬೇರೆಯವರ ಪಾಲಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸರ್ಕಾರ, ಜಿಲ್ಲಾಧಿಕಾರಿ ಕೂಡಲೇ ಪಹಣಿಗಳಲ್ಲಿ ವಕ್ಫ್ ಬೋರ್ಡ ಹೆಸರು ತೆಗೆದು ಹಾಕಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದೇವೆ. ನಮ್ಮ ಜಮೀನಿಗಾಗಿ ನಮ್ಮ ಪ್ರಾಣ ಕಳೆದುಕೊಳ್ಳಲು ಸಹ ಸಿದ್ಧರಿದ್ದೇವೆ. ನಮ್ಮ ಸಹನೆ, ತಾಳ್ಮೆ ಪರೀಸಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ರೈತರಾದ ಮಹಾಂತೇಶ ಕುಂಬಾರ, ನಾಗಪ್ಪ ನಾವಿ, ರಮೇಶ ನಾವಿ, ಕಲಾವತಿ ಮೇತ್ರಿ, ನಂದಕುಮಾರ ನಾಕ್ಕೆತ್ತಿನವರ, ಗುರಪ್ಪ ಅಗಸರ, ಮಳಸಿದ್ದಪ್ಪ ಅಗಸರ, ಮಾಂತೇಶ ಗುಡ್ಡೆನವರ, ಲಕ್ಷಿ$್ಮ ಗಣವಲಗ, ಮಹಿಮೂದಾಬೇಗಂ ಜಾಗೀರದಾರ, ಅಸ್ಪಾಕ್ ಅಹಮದ್ ಜಾಹೀರಾದಾರ, ಶರಣು ಬಿಸನಾಳ, ನಿಂಗಪ್ಪ ಬಿಸನಾಳ, ಅಶೋಕ ಕುಂಬಾರ, ಚಾಂದಸಾಬ ಜಮಾದಾರ, ಮಹಿಬೂಬ ಜಿನ್ನೆದಿ, ಪ್ರೇಮಸಿಂಗ್ ಚವ್ಹಾಣ, ಭರಮಣ್ಣ ನಾವದಗಿ, ವಿಶ್ವನಾಥ ಮಣಗಿರಿ, ಮಲಿಕಾರ್ಜುನ ಹೊರ್ತಿ ಇತರರಿದ್ದರು.