ಪ್ಯಾರಾಲಿಸಿಸ್ ಆಗಿದ್ದರಿಂದ ವಿಷ ಸೇವಿಸಿ ಆತ್ಮಹತ್ಯೆ

Crime Logo
Published on

ಹಿರೇಕೆರೂರ: ಪ್ಯಾರಾಲಿಸಿಸ್ ಆಗಿದ್ದರಿಂದ ಮನನೊಂದು ವೃದ್ಧನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳ್ಳೂರುತಾಂಡಾದಲ್ಲಿ ಬುಧವಾರ ಸಂಭವಿಸಿದೆ.
ಕೃಷ್ಣಾನಾಯ್ಕ ಸೋಮ್ಲಾನಾಯ್ಕ ಲಮಾಣಿ (70) ಮೃತ ವೃದ್ಧ.
ಈತನಿಗೆ ಎರಡು ವರ್ಷದಿಂದ ಪ್ಯಾರಾಲಿಸಿಸ್ ಆಗಿತ್ತು. ಆಸ್ಪತ್ರೆಗೆ ತೋರಿಸಿದರೂ ಗುಣವಾಗಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net