ವಯೋವೃದ್ಧರನ್ನು ಪ್ರೀತಿಯಿಂದ ಕಾಣಿ

BSP
Published on

ಬಸವಾಪಟ್ಟಣ: ವಯೋವೃದ್ಧರು ಪುಟ್ಟ ಮಕ್ಕಳಿದ್ದಂತೆ. ಮಕ್ಕಳಂತೆ ವೃದ್ಧರಿಗೂ ಕೂಡ ಅರಿವು ಇರುವುದಿಲ್ಲ. ಹಾಗಾಗಿ, ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಬೆಂಗಳೂರಿನ ಎಂವಿಡಿ ಫಾಜನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಾಲೀಕ ಆರ್. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಶ್ರೀ ಸಿದ್ದಾರೂಢ ವೃದ್ಧಾಶ್ರಮಕ್ಕೆ ಕಂಪನಿ ವಾರ್ಷಿಕೋತ್ಸವದ ಅಂಗವಾಗಿ ಆಶ್ರಮ ವಾಸಿಗಳಿಗೆ 150 ಹೊದಿಕೆ,150 ಟವೆಲ್ ವಿತರಿಸಿ ಮಾತನಾಡಿದರು.

ಜೀವನದ ಸಂಧ್ಯಾಕಾಲದಲ್ಲಿ ಇರುವ ವೃದ್ಧರ ಸೇವೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಇಂತಹ ಒಂದು ಪುಣ್ಯಕಾರ್ಯವನ್ನು ಉಮಾ ಗುರುಮೂರ್ತಿ ಕುಟುಂಬ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.

ಕೃಷ್ಣಾನಂದ ಸ್ವಾಮೀಜಿ ಮಾತನಾಡಿದರು. ಜಾನಪದ ಕವಿ ಯುಗಧರ್ಮ ರಾಮಣ್ಣ ದಾನದ ಮಹತ್ವ ಕುರಿತು ಪ್ರವಚನ ನೀಡಿದರು. ಕಂಪನಿ ಮುಖ್ಯ ಅಧಿಕಾರಿಗಳಾದ ಸಿ.ಎಂ. ಶಶಿಕುಮಾರ್, ವೇದಾವತಿ, ಎಂ.ಎಲ್. ಗೌರೀಶ್, ಸುಮಾ, ಆಶ್ರಮದ ಮಾತೋಶ್ರೀ ಪಾರ್ವತಮ್ಮ, ಕಾರ್ಯನಿರ್ವಾಹಕ ಎಚ್.ಟಿ. ಗುರುಮೂರ್ತಿ, ಪತ್ರಕರ್ತ ಎನ್.ವಿ. ರಮೇಶ್, ಶಿಕ್ಷಕ ಎಂ.ವಿ. ಯುವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net