ಆರೋಗ್ಯ ಸಮೀಕ್ಷೆ ಆರಂಭ

ILK NEWS 6-1
Published on

ಇಳಕಲ್ಲ: 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಕುರಿತು ದಾಖಲೆ ಸಂಗ್ರಹಕ್ಕೆ ಕಂದಾಯ ಇಲಾಖೆ ಮುಂದಾಗಿದ್ದು, ಚುನಾವಣೆ ಹಂತದ ಬಿಎಲ್‌ಒಗಳಿಂದ ಈ ಕಾರ್ಯ ಇಳಕಲ್ಲ- ಹುನಗುಂದ ಅವಳಿ ತಾಲೂಕಿನ ಎಲ್ಲ ಕಡೆ ಆರಂಭಗೊಂಡಿದೆ.

ತಂಡದಲ್ಲಿ ಓರ್ವ ಬಿಎಲ್‌ಒ ಜತೆಗೆ ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಕಂದಾಯ, ಪಂಚಾಯಿತಿ ಅಧಿಕಾರಿಗಳು ಇರುತ್ತಾರೆ. ಮನೆ ಮನೆಗಳಿಗೆ ತೆರಳಿ ನಿಗದಿತ ನಮೂನೆ ಪ್ರಕಾರ ಮನೆಯಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕಾಡುತ್ತಿರುವ ಕ್ಷಯ, ಕೆಮ್ಮು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ದಾಖಲೆ ಸಂಗ್ರಹಿಸಲಿದ್ದಾರೆ. ಉಳಿದಂತೆ ಮನೆಯಲ್ಲಿರುವವರ ಆರೋಗ್ಯ ಮಾಹಿತಿ ಸಂಗ್ರಹಿಸಲಿದ್ದಾರೆ. ಅವಳಿ ತಾಲೂಕಿನಲ್ಲಿ 302 ಬಿಎಲ್‌ಒ ಹಾಗೂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಇಳಕಲ್ಲ ತಾಲೂಕು ತಹಸೀಲ್ದಾರ್ ವೇದವ್ಯಾಸ ಮುತಾಲಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್-19 ಸಂಬಂಧಿತವಾದ ಆರೋಗ್ಯ ಸಮೀಕ್ಷೆ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರು ಎಲ್ಲ ರೀತಿಯ ನಿಖರ ಮಾಹಿತಿ ನೀಡುವುದು ಕರ್ತವ್ಯವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ಶಿಕ್ಷಕರು ಕೂಲಂಕಷವಾಗಿ ಎಲ್ಲ ಮನೆಗಳ ಮಾಹಿತಿ ಪಡೆದು ನಿಗದಿತ ನಮೂನೆಗಳಲ್ಲಿ ಸರ್ಕಾರಕ್ಕೆ ತಿಳಿಸುವ ಕಾರ್ಯ ಇದಾಗಿದೆ ಎಂದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net