ಸುರತ್ಕಲ್ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿದ ವೃದ್ಧನ ರಕ್ಷಣೆ

train 22
Published on

ಮಂಗಳೂರು: ಸುರತ್ಕಲ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮಂಗಳೂರು ಜಂಕ್ಷನ್- ಸಿಎಸ್‌ಎಂಟಿ ಸೂಪರ್ ಾಸ್ಟ್ ರೈಲು (12134) ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧರೊಬ್ಬರನ್ನು ನಿಲ್ದಾಣದ ಸ್ಟೇಷನ್ ಮಾಸ್ಟರ್ ಹಾಗೂ ಪಾಯಿಂಟ್ಸ್‌ಮೆನ್ ರಕ್ಷಿಸಿದ್ದಾರೆ.

ಮಂಗಳೂರು ಜಂಕ್ಷನ್- ಮುಂಬೈ ನಡುವೆ ಸಂಚರಿಸುವ ಸೂಪರ್ ಾಸ್ಟ್ ರೈಲು ಸುರತ್ಕಲ್ ನಿಲ್ದಾಣದಿಂದ ಮುಂದೆ ಚಲಿಸುತ್ತಿದ್ದಂತೆ ವೃದ್ಧ ಪ್ರಯಾಣಿಕರೊಬ್ಬರು ಗಡಿಬಿಡಿಯಲ್ಲಿ ರೈಲನ್ನು ಹತ್ತುವಾಗ ಆಯತಪ್ಪಿದ್ದಾರೆ. ಇದನ್ನು ನೋಡಿದ ನಿಶಾನೆ ಧ್ವಜ ತೋರುವ ರೈಲ್ವೆ ಸಿಬ್ಬಂದಿ (ಪಾಯಿಂಟ್ಸ್‌ಮೆನ್) ಜಗದೀಶ್ ಹಾಗೂ ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಓಡಿ ಬಂದು ವೃದ್ಧನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ತಕ್ಷಣವೇ ರೈಲು ನಿಂತಿದ್ದು, ವೃದ್ಧ ಪ್ರಯಾಣಿಕನನ್ನು ಸುರಕ್ಷಿತವಾಗಿ ಹತ್ತಿಸಿ ಕಳುಹಿಸಲಾಯಿತು.

ಸಕಾಲದಲ್ಲಿ ನೆರವಿಗೆ ಧಾವಿಸಿದ ಜಗದೀಶ್ ಹಾಗೂ ಮನೋಜ್ ಶೆಟ್ಟಿ ಅವರಿಗೆ ಕೊಂಕಣ ರೈಲ್ವೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ತಲಾ 5,000 ರೂ. ಬಹುಮಾನ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net