ಹೃದಯಸ್ತಂಭನದಿಂದ ವೃದ್ಧ ಸಾವು

Published on

ಹಗರೆ : ನ್ಯಾಯಬೆಲೆ ಅಂಗಡಿಗೆ ಕೂಲಿ ಕೆಲಸಕ್ಕೆ ಬಂದಿದ್ದ ವ್ಯಕ್ತಿ ಅಂಗಡಿ ಮುಂದೆ ಕೂತಲ್ಲೆ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಹಗರೆ ಸಮೀಪದ ಅಡವಿಬಂಟೇನಹಳ್ಳಿ ಗ್ರಾಮದ ನಿವಾಸಿ ನಿರ್ವಾಣೆಗೌಡ (63) ಮೃತ ವ್ಯಕ್ತಿ. ಇವರು ಹಗರೆಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅಕ್ಕಿ ವಿತರಿಸುವ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಎಂದಿನಂತೆ ಶನಿವಾರ ಕೆಲಸಕ್ಕೆ ಬಂದ ಇವರು ನ್ಯಾಯಬೆಲೆ ಅಂಗಡಿ ಪಕ್ಕದ ಅಂಗಡಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಮಾತನಾಡಿಸಲು ಮುಂದಾದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net