ವಾಗಳ್ಳಿಯಲ್ಲಿ ಬಾವಿಗೆ ಬಿದ್ದು ವೃದ್ಧ ಸಾವು

ylp ganapati gaonkar
Published on

ಯಲ್ಲಾಪುರ: ಅಡಕೆ ಮರ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಬಾಸಲ ಸಮೀಪದ ವಾಗಳ್ಳಿಯಲ್ಲಿ ನಡೆದಿದೆ.

ವಾಗಳ್ಳಿಯ ಅಂಬ್ಡೆಪಾಲಿನ ಗಣಪತಿ ಶಿವರಾಮ ಗಾಂವ್ಕರ (96) ಮೃತ ವೃದ್ಧ.

ಎಲೆ ಕೊಯ್ಯಲು ತೋಟಕ್ಕೆ ಹೋಗಿದ್ದ ಇವರು, ಏಣಿಯ ಮೂಲಕ ಎಲೆ ಬಳ್ಳಿ ಇರುವ ಅಡಕೆ ಮರವನ್ನು ಹತ್ತುತ್ತಿರುವಾಗ ಆಯತಪ್ಪಿ ಅಲ್ಲೇ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net