ಕೆರೆಯಲ್ಲಿ ಬಿದ್ದು ವೃದ್ಧ ಆತ್ಮಹತ್ಯೆ

1706801-suicide-by-hanging
Published on

ಲಕ್ಷ್ಮೇಶ್ವರ: ಪಟ್ಟಣದ ಇಟ್ಟಿಗೇರಿ ಕೆರೆಯಲ್ಲಿ ಬಿದ್ದು ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚನ್ನವೀರಪ್ಪ ರುದ್ರಪ್ಪ ಏಳುಮಗ್ಗದ (85)ಮೃತ ವ್ಯಕ್ತಿ. ಈತ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಗುರುವಾರ ಬೆಳಗ್ಗೆ ಕೆರೆಯಲ್ಲಿ ಅಪರಿಚಿತ ಶವ ದೊರೆತ ಬಗ್ಗೆ ಪೊಲೀಸರು ತನಿಖೆ ನಡೆಸಿದರು. ಶವ ನಾಪತ್ತೆಯಾಗಿದ್ದ ಚನ್ನವೀರಪ್ಪ ಅವರದ್ದೇ ಎಂಬುದು ತಿಳಿದು ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net