ಹಿರಿಯರ ಮಾರ್ಗದರ್ಶನ ಉತ್ತಮ ಸಮಾಜಕ್ಕೆ ಪ್ರೇರಣೆ

20Athni3
Published on

ಅಥಣಿ: ಹಿರಿಯರ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿದೆ ಎಂದು ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಪಟ್ಟಣದ ಶೆಟ್ಟರಮಠದ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಬಣಜಿಗ ಸಮುದಾಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಂದಾಣಿಕೆ ಕೊರತೆಯಿಂದ ಒಗ್ಗಟ್ಟಿಲ್ಲದಂತಾಗುತ್ತಿದೆ. ಆದ್ದರಿಂದ ಬಣಜಿಗ ಸಮುದಾಯ ನಿರಂತರವಾಗಿ ಸಮಾಜ ಸಂಘಟನೆ ಮತ್ತು ಲಿಂಗಾಯತ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಿರಿಯರನ್ನು ಗೌರವಿಸುವುದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಸಾಧಕರನ್ನು ಸನ್ಮಾನಿಸುವಂತಹ ಸಮಾಜಮುಖಿ ಕಾರ್ಯಗಳು ಇತರ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು.

ನಿವೃತ್ತ ಪೌರಾಯುಕ್ತ ಬಸವರಾಜ ಮಂಗಸೂಳಿ ಮಾತನಾಡಿ, ಸಮಾಜದಿಂದ ಪಡೆದದನ್ನು ಸಮಾಜಕ್ಕೆ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮುರುಗೆಪ್ಪ ಗೋಟಖಿಂಡಿ, ಚನ್ನಮಲ್ಲಪ್ಪ ಗೋಟಖಿಂಡಿ, ಮಹಾದೇವಿ ಚುನಮುರಿ, ಬಸವರಾಜ ಮಂಗಸೂಳಿ, ಸಿದ್ದಪ್ಪ ಮಹಾಜನ, ಚಂದ್ರಶೇಖರ ಕರಾಳೆ, ಕಾಡಪ್ಪ ಹಲ್ಯಾಳ, ಶಿವಯೋಗಿ ಗೆಜ್ಜಿ, ಶಿವಯೋಗಿ ಮಂಗಸೂಳಿ, ಮುರುಗೆಪ್ಪ ಗೆಜ್ಜಿ, ವಿಜಯ ಗೊಟಖಿಂಡಿ, ಮಹೇಶ ಚುನಮುರಿ, ಸಂತೋಷ ಸಾವಡಕರ, ಅಶೋಕ ಕಾವೇರಿ, ಸುವರ್ಣಾ ಚುನಮುರಿ ಇವರನ್ನು ಸನ್ಮಾನಿಸಲಾಯಿತು. ಬಣಜಿಗ ಸಮಾಜದ ಅಧ್ಯಕ್ಷ ಸಂಗಪ್ಪ ಉಣ್ಣಿ, ಅಲ್ಲಪ್ಪ ನಿಡೊಣಿ, ಶಂಕರ ಬುರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net