ವೃದ್ಧಾಶ್ರಮದಲ್ಲಿ ಹಿರಿಯರ ದಿನ ಆಚರಣೆ

ಕುಶಾಲನಗರ ಸಮೀಪದ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಿರಿಯರ ದಿನ ಆಚರಿಸಿದರು. ಡಾ.ಪ್ರವೀಣ್, ನಿತಿನ್, ಸುಮನ್, ನಾರಾಯಣ್, ಹರ್ಷ ಇದ್ದರು.
ಕುಶಾಲನಗರ ಸಮೀಪದ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಿರಿಯರ ದಿನ ಆಚರಿಸಿದರು. ಡಾ.ಪ್ರವೀಣ್, ನಿತಿನ್, ಸುಮನ್, ನಾರಾಯಣ್, ಹರ್ಷ ಇದ್ದರು.
Published on

ಕುಶಾಲನಗರ: ಹಿರಿಯರ ದಿನ ಅಂಗವಾಗಿ ಇಲ್ಲಿನ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕೂಡಿಗೆಯಲ್ಲಿನ ವೃದ್ಧಾಶ್ರಮದ ಹಿರಿಯ ಜೀವಗಳೊಂದಿಗೆ ಶುಕ್ರವಾರ ಸಮಯ ಕಳೆಯುವ ಮೂಲಕ ಹಿರಿಯರ ದಿನ ಆಚರಿಸಿದರು.

ಲಯನ್ಸ್ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ನೇತೃತ್ವದ ತಂಡ ಮೇಲ್ವಿಚಾರಕ ಚಂದ್ರು ಅವರಿಗೆ ತಾಜಾ ಮಾಂಸಾಹಾರ ಹಾಗೂ ಪೌಷ್ಟಿಕಾಂಶಯುಕ್ತ ದ್ವಿದಳ ಧಾನ್ಯಗಳನ್ನು ಹಸ್ತಾಂತರಿಸಿತು.

ಮುಪ್ಪು ಇಂದು ನಿಮಗೆ.. ನಾಳೆ ನಮಗೆ. ಹಾಗಾಗಿ ಇರುವಷ್ಟು ದಿನಗಳ ಕಾಲ ನಿಶ್ಚಿಂತೆಯಿಂದ ಕಾಲ ಕಳೆಯಬೇಕು ಎಂದು ಡಾ.ಪ್ರವೀಣ್ ಆತ್ಮಸ್ಥೈರ್ಯ ತುಂಬಿದರು.

ಲಯನ್ಸ್ ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಕಿರಣ್, ವಲಯಾಧ್ಯಕ್ಷ ಸುಮನ್ ಬಾಲಚಂದ್ರ, ನಿರ್ದೇಶಕ ಕೊಡಗನ ಹರ್ಷ, ನಾರಾಯಣ್, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net