ವೃದ್ಧ ದಂಪತಿ ಜಗಳ ಕೊಲೆಯಲ್ಲಿ ಅಂತ್ಯ

Crime Logo
Published on

ಹಾನಗಲ್ಲ: ಕೌಟುಂಬಿಕ ಹಣಕಾಸಿನ ವಿಷಯ ಕುರಿತು ಆರಂಭವಾದ ವೃದ್ಧ ದಂಪತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನಾಗವ್ವ ಶೇಖಪ್ಪ ಭೋವಿವಡ್ಡರ (58) ಕೊಲೆಯಾದ ಮಹಿಳೆ. ಶೇಖಪ್ಪ ಭೋವಿವಡ್ಡರ (60) ಪತ್ನಿಯನ್ನು ಕೊಲೆಗೈದ ಪತಿ. ಶುಕ್ರವಾರ ರಾತ್ರಿ ನಾಗವ್ವ ಹಾಗೂ ಶೇಖಪ್ಪ ಅವರ ಮಧ್ಯೆ ಜಗಳ ಆರಂಭಗೊಂಡಿತ್ತು. ಶೇಖಪ್ಪ ಸಿಟ್ಟಿನಲ್ಲಿ ದೊಣ್ಣೆಯಿಂದ ಪತ್ನಿ ನಾಗವ್ವಳ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಬಲವಾದ ಏಟಿಗೆ ಕುಸಿದು ಬಿದ್ದ ನಾಗವ್ವ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಾನಗಲ್ಲ ಪೊಲೀಸರು, ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠ ಸಿ. ಗೋಪಾಲ, ಸಿಪಿಐ ಆರ್. ವೀರೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net