ಮರಳಿ ಕುಟುಂಬ ಸೇರಿದ ವೃದ್ಧೆ

IMG_20240603_182959
Published on

ಹೊಳೆನರಸೀಪುರ: ಮಧ್ಯರಾತ್ರಿ ನಡು ರಸ್ತೆಯಲ್ಲೇ ಬಿಟ್ಟು ಹೋದ ವೃದ್ಧೆಯನ್ನು ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಕುಟುಂಬಕ್ಕೆ ವಾಪಸ್ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ತಾಲೂಕಿನ ಚಿಟ್ಟನಹಳ್ಳಿ ಗ್ರಾಮದ ಲಕ್ಕಮ್ಮ (80) ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ತಾತನಹಳ್ಳಿ ಗ್ರಾಮ ಸಮೀಪದ ಗುಡ್ಡ ಮಂಟಿ ಹಳ್ಳದಲ್ಲಿ ಗಾಯಗಳಾಗಿ ನಿತ್ರಾಣಗೊಂಡು ನರಳಾಡುತ್ತಿದ್ದರು. ಸೋಮವಾರ ಬೆಳಗ್ಗೆ ತಂಬಾಕು ನಾಟಿ ಮಾಡಲು ಜಮೀನಿಗೆ ತೆರಳುತ್ತಿದ್ದ ರೈತರು ವೃದ್ಧೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಂಬುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು.


ಆಸ್ಪತ್ರೆಯಲ್ಲಿ ವೃದ್ಧೆಯನ್ನು ವಿಚಾರಿಸಿದಾಗ ಚಿಟ್ಟನಹಳ್ಳಿ ಗ್ರಾಮದವಳಾಗಿದ್ದು, ನನ್ನ ಮಗ- ಮೊಮ್ಮಗ ಮಧ್ಯರಾತ್ರಿ ಬಿಟ್ಟು ಹೋದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಕುಟುಂಬದವರನ್ನು ಆಸ್ಪತ್ರೆಗೆ ಕರೆಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಕುಟುಂಬದವರು ಪೊಲೀಸರ ಸಲಹೆಯಂತೆ ಮನೆಗೆ ಕರೆದೊಯ್ಯುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net