ಹಿಂದು ಏಕತಾ ಗಣಪತಿ ಧ್ವಜಪೂಜೆ

mkg1
Published on

ಚನ್ನಗಿರಿ: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಬುಧವಾರ ಶಾಸಕ ಶಿವಗಂಗಾ ಬಸವರಾಜ್ ನೇತೃತ್ವದಲ್ಲಿ ಹಿಂದು ಏಕತಾ ಗಣಪತಿ ಧ್ವಜಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭ ಶಾಸಕರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು. 28 ವಿವಿಧ ಸಮಾಜದವರು ಸೇರಿ ಇಡುವಂತ ವಿಶೇಷ ಗಣೇಶ ಇದಾಗಿದೆ. ಸಹೋದರ ಭಾತೃತ್ವವನ್ನು ಬೆಳೆಸುವ ಗಣಪತಿ ಹಬ್ಬ ಇದಾಗಲಿದೆ ಎಂದರು.

ಈಗಾಗಲೇ ಗಣೇಶೋತ್ಸವ ಸಮಿತಿ ರಚನೆ ಮಾಡಲಾಗಿದ್ದು, ಸಮಾಜದ ಶಾಂತಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಹಬ್ಬ ಆಚರಿಸಬೇಕು ಎಂದರು.

ಹಾಲಸ್ವಾಮಿ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮಿಗಳು, ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಸಿ. ನಾಗರಾಜ್, ಎಂ. ಯೋಗೇಶ್, ಬಿ.ಆರ್. ಹಾಲೇಶ್, ಪಿ.ಆರ್. ಮಂಜುನಾಥ್, ರುದ್ರಯ್ಯ, ಚಂದ್ರನಾಯ್ಕ, ಶಶಿಧರ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net