ನಾಗೇಶ್ ಕಾಮತ್‌ರಿಗೆ ಏಕಲವ್ಯ ಪ್ರಶಸ್ತಿ

gaurava
ಕುಂದಾಪುರ ನಗರದ ಶ್ರೀರಾಮ ವಿದ್ಯಾಕೇಂದ್ರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂಚಾಲಕ ನಾಗೇಶ್ ಕಾಮತ್ ಅವರಿಗೆ ಏಕಲವ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಕುಂದಾಪುರ: ಉಡುಪಿ ಬ್ರಹ್ಮಗಿರಿ ಸರ್ಕಲ್ ಬಳಿಯ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ನಡೆದ ವಿಶ್ವಮಾನವಾಧಿಕಾರ ಮತ್ತು ಲೋಕ ಪರಿಷತ್‌ನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಕುಂದಾಪುರ ನಗರದ ಶ್ರೀರಾಮ ವಿದ್ಯಾ ಕೇಂದ್ರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂಚಾಲಕ ನಾಗೇಶ್ ಕಾಮತ್ ಅವರಿಗೆ ಏಕಲವ್ಯ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವಮಾನವಾಧಿಕಾರ ಮತ್ತು ಲೋಕಪರಿಷತ್ ಅಧ್ಯಕ್ಷ ಡಾ. ಶಂಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಪ್ರಸಿದ್ಧ ರವಿಕಿರಣ್ ಮುರುಡೇಶ್ವರ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು. ಶ್ಯಾಮ ಸುಂದರ ನಾಯರಿ, ಎಂ.ಫಾರೂಕ್ ಚಂದ್ರ, ನಗರ ಅಖಿಲ್ ಬಿ. ಹೆಗಡೆ, ಮುಖ್ಯ ಕಾರ್ಯದರ್ಶಿ ದೇವೇಂದ್ರ ಸುವರ್ಣ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷ ಇಕ್ಬಾಲ್ ಕುಂಜಿಬೆಟ್ಟು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net