ಎಕ್ಕೂರು ಬಾಬಾ ನಿಧನ

baba
Published on

ಮಂಗಳೂರು: ಎಕ್ಕೂರು ಗೋರಿಗುಡ್ಡ ನಿವಾಸಿ ಎಕ್ಕೂರು ಬಾಬ ಯಾನೆ ಶುಭಕರ ಶೆಟ್ಟಿ(61) ಶುಕ್ರವಾರ ನಿಧನರಾದರು.

ಲಿವರ್ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಗುರುವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟರು. 1990ರ ದಶಕದಲ್ಲಿ ಎಕ್ಕೂರು ಬಾಬ ಎಂದು ಗುರುತಿಸಿಕೊಂಡಿದ್ದರು. ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದ ಅವರು, ಹಿಂದು ಯುವ ಸೇನೆ ಕೇಂದ್ರೀಯ ಮಂಡಳಿ ಸ್ಥಾಪಕ ಸದಸ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net