ಏಕಾಹ ಭಜನೆ ಆಮಂತ್ರಣ ಬಿಡುಗಡೆ

Published on

ಸುಳ್ಯ: ನಗರದ ಶ್ರೀರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಏಕಾಹ ಭಜನೆಯ ಪೂರ್ವಭಾವಿ ಸಿದ್ಧತೆ ಸಭೆ, ಶನಿವಾರ ಮಂದಿರದ ಧರ್ಮದರ್ಶಿ ಮಂಡಳಿ ಸಮಿತಿಯ ಉಪಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅಧ್ಯಕ್ಷತೆಯಲ್ಲಿ ನಡೆಯಿತು.

ನ.12ರಂದು ನಡೆಯಲಿರುವ ಏಕಾಹ ಭಜನೆಯ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು. ಅರ್ಚಕ ಹರ್ಷ ಕೃಷ್ಣ ಭಟ್ ಪ್ರಾರ್ಥಿಸಿದರು.

ಧರ್ಮದರ್ಶಿ ಮಂಡಳಿಯ ಸದಸ್ಯರಾದ ಅಶೋಕ ಪ್ರಭು ಸುಳ್ಯ, ಗೋಪಾಲ ಎಸ್.ನಡುಬೈಲು, ಭಾಸ್ಕರ ನಾಯರ್ ಅರಂಬೂರು, ಶಶಿಧರ ಪಿಳ್ಳೆ, ಕಾರ್ಯದರ್ಶಿ ಶ್ರೀನಿವಾಸ ಸುಳ್ಯ, ವಾಸುದೇವ ನಾಯಕ್ ಕೇರ್ಪಳ, ಇಂಜಿನಿಯರ್ ಸುಮಿತ್ರ ಗೌಡ, ಬೆಳ್ಯಪ್ಪ ಗೌಡ ಬಳ್ಳಡ್ಕ, ಬಂಗಾರು ಭಾರದ್ವಾಜ್, ಸೌಮ್ಯ ಭಾರದ್ವಾಜ್, ನಮಿತಾ ರಾವ್, ಹೇಮಲತಾ, ಗಣೇಶ್ ಆಚಾರ್ಯ ಸುಳ್ಯ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net