ಶ್ರೀ ರಾಮ ಮಂದಿರದಲ್ಲಿ ಏಕಾಹ ಭಜನೆ

New Project (30)
Published on

ಸುಳ್ಯ: ನಗರದ ಶ್ರೀ ರಾಮಪೇಟೆಯ ಶ್ರೀ ರಾಮ ಮಂದಿರದಲ್ಲಿ ಏಕಾಹ ಭಜನೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿತು. ಹಿರಿಯರಾದ ಕಾರ್ಕಳ ವೆಂಕಟರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಮೋಹನದಾಸ ಶೆಣೈ ದೀಪ ಪ್ರಜ್ವಲನೆಗೈದರು. ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು, ಉಪಾಧ್ಯಕ್ಷ ಕೃಷ್ಣ ಕಾಮತ್, ಕಾರ್ಯದರ್ಶಿ ಶ್ರೀನಿವಾಸ ರಾವ್, ಜತೆ ಕಾರ್ಯದರ್ಶಿ ಮಹಾಬಲ ಕೇರ್ಪಳ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net