ಹತ್ಯೆ ಪ್ರಕರಣ ಭೇದಿಸಲು ಎಂಟು ತಂಡ

h22-devappajja
Published on

ಹುಬ್ಬಳ್ಳಿ: ಇಲ್ಲಿಯ ಈಶ್ವರ ನಗರದ ವೈಷ್ಣೋದೇವಿ ದೇವಸ್ಥಾನದ ಮುಖ್ಯಸ್ಥ ಹಾಗೂ ಅರ್ಚಕ ದೇವೇಂದ್ರಪ್ಪ ವನಹಳ್ಳಿ (63) ಹತ್ಯೆ ಮಾಡಿದ ಹಂತಕನ ಪತ್ತೆಗೆ ಪೊಲೀಸರ ಎಂಟು ತಂಡಗಳನ್ನು ರಚಿಸಲಾಗಿದೆ.
ಚಾಕುವಿನಿಂದ ಇರಿದ ತಕ್ಷಣ ಸುತ್ತಲಿನ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಕೆಲ ಕ್ಯಾಮರಾಗಳಲ್ಲಿ ವ್ಯಕ್ತಿ ಓಡಾಡಿದ್ದು ಅದು ನಿಖರವಾಗಿಲ್ಲ ಎನ್ನಲಾಗುತ್ತಿದೆ. ಆದರೂ ಎಲ್ಲ ಮಗ್ಗಲುಗಳನ್ನು ಪರಿಶೀಲಿಸಲಾಗುತ್ತಿದೆ. ಡಿಸಿಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳು ರಚನೆಯಾಗಿವೆ.
ನಾಳೆ ಅಂತಿಮ ನಮನ: ದೇವೇಂದ್ರಪ್ಪ ವನಹಳ್ಳಿ ಅವರ ಮೃತದೇಹ ಕಿಮ್ಸ್ ಶವಾಗಾರದಿಂದ ಜು. 23ರಂದು ಲೋಕಪ್ಪನ ಹಕ್ಕಲದ ಮನೆಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ಪೂಜಾ ವಿಧಿ ವಿಧಾನ ಮುಗಿಸಿ, ನಂತರ ಕುಸುಗಲ್ ಗ್ರಾಮದಲ್ಲಿರಿಸಿ ಅಂತಿಮ ದರ್ಶನವಾದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net