ಡಾ.ಸಿಪಿಕೆ ಕಾವ್ಯ ಪ್ರಶಸ್ತಿಗೆ ಎಂಟು ಸಾಧಕರ ಆಯ್ಕೆ

Published on

ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ‘ಪಂಪ ಪ್ರಶಸ್ತಿ’ ಪುರಸ್ಕೃತ ಹಿರಿಯ ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅವರ ಗೌರವಾರ್ಥ ನೀಡಲಾಗುವ ಎರಡನೇ ವರ್ಷದ ‘ಡಾ. ಸಿಪಿಕೆ ಕಾವ್ಯ ಪ್ರಶಸ್ತಿ’ಗೆ ನಾಡಿನ ವಿವಿಧ ಜಿಲ್ಲೆಗಳ ಎಂಟು ಜನ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಹಿರಿಯ ಕವಯತ್ರಿ ಡಾ. ವಿಜಯಮಾಲಾ ರಂಗನಾಥ್, ಯುವ ಕವಯತ್ರಿಯರಾದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರಶ್ಮಿ ಪೆಲತ್ತಡ್ಕ, ಚಿಕ್ಕಮಗಳೂರು ಜಿಲ್ಲೆಯ ಡಾ.ಬಿ.ಆರ್. ಶ್ರುತಿ ಹಾಗೂ ಚಾಮರಾಜನಗರ ಜಿಲ್ಲೆಯ ಹಿರಿಯ ಕವಿ ಮಂಜು ಕೋಡಿಉಗನೆ, ಯುವ ಕವಿಗಳಾದ ಯಾದಗಿರಿ ಜಿಲ್ಲೆಯ ಡಾ.ನಾಗಣ್ಣ ಕಿಲಾರಿ, ಕಲುಬುರಗಿ ಜಿಲ್ಲೆಯ ಎನ್.ಎಸ್. ಚಾಂದಾ ಪಾಷ, ಮಂಡ್ಯ ಜಿಲ್ಲೆಯ ಗಣಂಗೂರು ನಂಜೇಗೌಡ, ಕೋಲಾರ ಜಿಲ್ಲೆಯ ಡಾ.ಗುಣವಂತ ಮಂಜು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅ. 20 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಡಾ. ಸಿಪಿಕೆ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಿರುವ ರಾಜ್ಯ ಮಟ್ಟದ ‘ದಸರಾ ಕವಿ-ಕಾವ್ಯ ಸಂಭ್ರಮ’ದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net