ಹಿರೀಸಾವೆಯಲ್ಲಿ ಈದುಲ್ ಫಿತ್ರ್

11 HRS 01
Published on


ಹಾಸನ: ಹಿರೀಸಾವೆ ಪಟ್ಟಣದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಸಂಭ್ರಮ ಸಡಗರದಿಂದ ಗುರುವಾರ ಆಚರಿಸಿದರು.


ರಂಜಾನ್ ಮಾಸದ ಒಂದು ತಿಂಗಳ ಉಪವಾಸದ ನಂತರ ಮುಸ್ಲಿಮರು ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶುಭಾಶಯಗಳನ್ನು ಕೋರಿ, ಸಿಹಿ ಹಂಚಿದರು. ಮೌಲಾನ ನಜುರ್ ಉಲ್ಲಾ ನಮಾಜ್ ಬೋಧಿಸಿ ರಂಜಾನ್ ಹಬ್ಬದ ಮಹತ್ವ ತಿಳಿಸಿದರು.

ಮುಸ್ಲಿಂ ಸಮಿತಿ ಅಧ್ಯಕ್ಷ ಜಮಾಲ್ ಪಾಷ, ಕಾರ್ಯದರ್ಶಿ ಇಲಿಯಾಸ್, ಮುಖಂಡರಾದ ಅಸ್ಲಾಂಪಾಷ, ಅಕ್ಬರ್,ಬಾಬು, ಮಹಮ್ಮದ್ ರಫೀಕ್, ನದೀಂ, ಅಮೀರ್ ಜಾನ್, ಸಲೀಂ ಮತ್ತಿತರರು ಪ್ರಾರ್ಥನಾ ಸಭೆಯ ನೇತೃತ್ವ ವಹಿಸಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net