ಪ್ರೀತಿ ಹಾಗೂ ಸಹಬಾಳ್ವೆಯೇ ಈದ್‌ಮಿಲಾದ್

16 ckm 4
ಚಿಕ್ಕಮಗಳೂರು ಹೊರವಲಯದ ಕಲ್ಲುದೊಡ್ಡಿ ಶಾಂತಿನಗರದಲ್ಲಿ ಎಚ್‌ಕೆಜೆಎಂ ಮಸೀದಿಯಲ್ಲಿ ಆಯೋಜಿಸಿದ್ದ ಈದ್‌ಮಿಲಾದ್, ಮಕ್ಕಳ ಸಾಂಸ್ಕೃತಿಕ ಗಾಯನ ಹಾಗೂ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಶಾಹೀದ್ ಮಹಮ್ಮದ್ ರಜ್ವಿ ಮಾತನಾಡಿದರು. ಮುನೀರ್ ಅಹ್ಮದ್, ಎಪಿಎಸ್ ತಂಗಲ್, ಖಲಂದರ್, ಅಹ್ಮದ್ ಷರೀಫ್, ನ್ಸರ್‌ಆಲಿ, ಜಮೀರ್ ಅಹ್ಮದ್, ಖಲೀದ್ ಅಹ್ಮದ್, ತನ್ವೀರ್ ಅಹ್ಮದ್, ವಾಂಡಿ ರಜಾಕ್, ಸಿದ್ದಿಕಿ ಮತ್ತಿತರಿರದ್ದರು.
Published on

ಚಿಕ್ಕಮಗಳೂರು: ಮಾನವರಲ್ಲಿ ಪ್ರೀತಿ ಹಾಗೂ ಸಹಭಾಳ್ವೆ ಮೂಡಿಸುವ ಹಬ್ಬವೇ ಈದ್‌ಮಿಲಾದ್ ಆಗಿದ್ದು, ಜೀವನದಲ್ಲಿ ಸಾಮರಸ್ಯ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಶಾಹೀದ್ ಮಹಮ್ಮದ್ ರಜ್ವಿ ತಿಳಿಸಿದರು.

ನಗರದ ಕಲ್ಲುದೊಡ್ಡಿ ಶಾಂತಿನಗರದಲ್ಲಿ ಎಚ್‌ಕೆಜೆಎಂ ಮಸೀದಿಯಲ್ಲಿ ಆಯೋಜಿಸಿದ್ದ ಈದ್‌ಮಿಲಾದ್, ಮಕ್ಕಳ ಸಾಂಸ್ಕೃತಿಕ ಗಾಯನ ಹಾಗೂ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್‌ರ ೧೪೯೯ ಜನ್ಮದಿನ ಅತ್ಯಂತ ಪವಿತ್ರವಾದದು. ಸರ್ವಧರ್ಮ ಒಂದೇ ಎಂಬ ಸಂದೇಶವನ್ನು ಸಮಾಜದಲ್ಲಿ ಸಾರಿ ಶಾಂತಿ, ನೆಮ್ಮದಿ ನೆಲೆಸಲು ಕಾರಣರಾದ ಸಂತರ ಜನ್ಮದಿನ ಆಚರಿಸುತ್ತಿರುವುದು ಬಹಳಷ್ಟು ಹೆಮ್ಮೆ ತಂದಿದೆ ಎಂದರು.
ಈಗಾಗಲೇ ವಕ್ಫ್ ಸಮಿತಿಯಿಂದ ಶಾಂತಿನಗರ, ಉಪ್ಪಳ್ಳಿ ಮಸೀದಿಗಳ ಅಭಿವೃದ್ಧಿ ದೃಷ್ಟಿಯಿಂದ ತಲಾ ೨೦ ಲಕ್ಷ ರೂ.ಗಳನ್ನು ಶಾಸಕರು ಹಾಗೂ ವಕ್ಫ್ ರಾಜ್ಯಾಧ್ಯಕ್ಷರ ಸಹಕಾರದಿಂದ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಸೀದಿಗಳ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಸೀದಿ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಮೂಡಿಸಲು ಕನ್ನಡ, ಉರ್ದು, ಮಲೆಯಾಳಿ ಭಾಷೆಗಳ ಗಾಯನ ಕಾರ್ಯ ಕ್ರಮ ಏರ್ಪಡಿಸಲಾಗಿದ್ದು ಮಕ್ಕಳು ಖುಷಿಯಿಂದ ಪಾಲ್ಗೊಂಡು ಮನರಂಜಿಸಿದರು ಎಂದರು.
ಇದೇ ವೇಳೆ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ಹಿನ್ನೆಲೆಯಲ್ಲಿ ಅಂಗವಾಗಿ ಮಸೀದಿಯಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಗುರು ಎಪಿಎಸ್ ತಂಗಲ್, ನಗರಸಭಾ ಸದಸ್ಯ ಖಲಂದರ್, ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಷರೀಫ್, ಮುಖಂಡರಾದ ಅನ್ಸರ್‌ಆಲಿ, ಜಮೀರ್ ಅಹ್ಮದ್, ಖಲೀದ್ ಅಹ್ಮದ್, ತನ್ವೀರ್ ಅಹ್ಮದ್, ವಾಂಡಿ ರಜಾಕ್, ಸಿದ್ದಿಕಿ ಮತ್ತಿತರಿರದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net