ಈದ್ ಉಲ್ ಫಿತ್ರ್ ಸರಳ ಆಚರಣೆ

0101
Published on

ಬೆಳಗಾವಿ: ಕರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೋಮವಾರ ಸರಳವಾಗಿ ಈದ್ ಉಲ್ ಫಿತ್ರ್ ಆಚರಿಸಲಾಯಿತು.
ಪ್ರತಿವರ್ಷ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.

ಈ ಬಾರಿ ಕರೊನಾ ವೈರಸ್ ಕಾರಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೈಹಿಕ ಅಂತರ ಕಾಪಾಡಬೇಕಿದೆ. ಹೀಗಾಗಿ ಮುಸ್ಲಿಮರು ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ, ಅಲ್ಲಾಹ್‌ನ ಕೃಪೆಗೆ ಪಾತ್ರರಾದರು. ಸಕಲ ಜೀವರಾಶಿಗೆ ಒಳಿತಾಗಲಿ. ಭಾರತ ಕರೊನಾ ಮುಕ್ತವಾಗಲಿ.

ರೈತರ ಬದುಕು ಹಸನಾಗಲಿ ಎಂದು ಇಸ್ಲಾಂ ಧರ್ಮದವರು ದೇವರಲ್ಲಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net