ಕಿಕ್ಕೇರಿಯಲ್ಲಿ ಈದ್ ಉಲ್ ಫಿತ್ರ್

31kkr2( 3-25 ramjan
ಕಿಕ್ಕೇರಿಯಲ್ಲಿ ಸೋಮವಾರ ಮುಸ್ಲಿಮರು ಸಾಮೂಹಿಕ ಮೆರವಣಿಗೆ ನಡೆಸಿದರು.
Published on

ಕಿಕ್ಕೇರಿ: ಇಲ್ಲಿನ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಸೋಮವಾರ ರಂಜಾನ್ ಉಪವಾಸ ಮುಕ್ತಾಯಗೊಳಿಸಿ ಸಂಭ್ರಮ ಸಡಗರದಿಂದ ಈದ್ ಉಲ್ ಫಿತ್ರ್ ಆಚರಿಸಿದರು.

ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಒಂದೆಡೆ ಸೇರಿ ಅಲ್ಲಾನಿಗೆ ಮೊದಲ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಫಕ್ರಿಯಾ ಆಲಂ ಅಣತಿಯಂತೆ ಸಾಂಪ್ರದಾಯಿಕವಾಗಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿದರು. ಮಂದಗೆರೆ ರಸ್ತೆಯ ಮೂಲಕ ಅಂತಿಮವಾಗಿ ಈದ್ಗಾ ಮೈದಾನದಲ್ಲಿ ಜಮಾಯಿಸಿದರು. ಪುಟಾಣಿಗಳು ಹೊಸ ಡುಪು ಧರಿಸಿ ಹಿರಿಯರೊಂದಿಗೆ ಹೆಜ್ಜೆ ಹಾಕಿದರು.

ಈದ್ಗಾ ಮೈದಾನದಲ್ಲಿ ಧರ್ಮಗುರು ಪ್ರವಚನ ನೀಡಿದರು. ಬಳಿಕರ ಅಮಾನಿಕೆರೆಯ ತಟದಲ್ಲಿರುವ ರುದ್ರಭೂಮಿಗೆ ತೆರಳಿದರು. ರುದ್ರಭೂಮಿಯಲ್ಲಿ ಪಿತೃಗಳಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ನಮಿಸಿದರು. ಮಕ್ಕಳು, ಮುಖಂಡರು ತಮ್ಮ ಬಂಧುಗಳೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ಸಮೀಪದ ಆನೆಗೊಳ, ಮಂದಗೆರೆ ಗ್ರಾಮದಲ್ಲಿಯೂ ಮುಸ್ಲಿಮರು ಹಬ್ಬ ಆಚರಿಸಿದರು. ಹೊಸ ಉಡುಗೆ ತೊಟ್ಟು, ಉಪವಾಸ ವ್ರತ ಅಂತ್ಯಗೊಳಿಸಿ ಹಬ್ಬದೂಟವನ್ನು ಸವಿದರು. ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net