

ಆಯನೂರು: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಆಯನೂರು ಕೋಟೆ ಗ್ರಾಮದಲ್ಲಿ ಭಾನುವಾರ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ಪೂರಕವಾಗಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಆಚರಿಸಿದರು.
ಕೋಟೆ ಗ್ರಾಮದ ಗೌಸಿಯ ಮಸೀದಿಯಿಂದ ಸಾಗಿದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಾದ ದುರ್ಗಮ್ಮನ ಬೀದಿ, ಸಾಮಿಲï ರಸ್ತೆ, ರಾಷ್ಟಿçÃಯ ಹೆz್ದÁರಿಯ ವಿನಾಯಕ ವೃತ್ತ, ಹಾರನಹಳ್ಳಿ ರಸ್ತೆಯಲ್ಲಿ ಸಂಚರಿಸಿ ಪುನಃ ಗೌಸಿಯ ಮಸೀದಿಗೆ ಬಂದು ತಲುಪಿತು. ಕವಾಲಿ ಹಾಗೂ ಕೋಣಂದೂರಿನಿAದ ಆಗಮಿಸಿದ್ದ ರಿವಾತ್ ಹಾಡಿನ ನೃತ್ಯದ ಮೂಲಕ ಮೆರವಣಿಗೆ ಸಾಗಿತು. ಸೋಮವಾರ ಮಕ್ಕಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಗೌಸಿಯ ಮಸೀದಿಯ ಅಧ್ಯಕ್ಷ ಅಲ್ತಾ-ï ಸೆಕ್ರೆಟರಿ ನೂರು¯್ಲÁ, ಗೌಸ್ ಸಾಬ್, ಸೈಯದ್ ಅಹಮದ್ ಜೆರುದ್ದೀನ್ ಮುನ್ನ(ಸನವುಲ್ಲ), ರಫೀಕ್, ರಕ್ಷಾ ಸಮಿತಿಯ ಸದಸ್ಯ ಸೈಯದ್ ಅಹಮದ್, ಮುಖಂಡರಾದ ಮುಕ್ತಿಯರ್ ಅಹಮದ್, ನಜೀರ್ ಸಾಬ್ -Àಯಾಜ್, ಅಹ್ಮದ್ ಅಜರ್ ಬಾಷಾ ತಾಸಿರ್ ಜಾಕಿರುದ್ದೀನ್, ಅಸ್ಲಾಂ ಹಾಗೂ ಇತರರು ಮೆರವಣಿಗೆಯಲ್ಲಿದ್ದರು.